October 9, 2026
Friday, October 9, 2026
spot_img

CINE | ‘ಟಾಕ್ಸಿಕ್’ನಿಂದ ಮತ್ತೊಂದು ಸರ್ಪ್ರೈಸ್: ಇಂದು ರಿಲೀಸ್ ಆಗುತ್ತಂತೆ ‘ಮನಮೋಹಕ’ ಹಾಡು

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಟಾಕ್ಸಿಕ್’ ಚಿತ್ರದ ಮೊದಲ ಹಾಡು ಭರ್ಜರಿ ಪ್ರತಿಕ್ರಿಯೆ ಪಡೆದ ಬೆನ್ನಲ್ಲೇ ಚಿತ್ರತಂಡ ಮತ್ತೊಂದು ಹೊಸ ಹಾಡನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ‘ಮನಮೋಹಕ’ ಎಂಬ ಎರಡನೇ ಹಾಡು ಇಂದು ಬೆಳಿಗ್ಗೆ 11.33ಕ್ಕೆ ಅಭಿಮಾನಿಗಳ ಮುಂದೆ ಬರಲಿದೆ.

ರೊಮ್ಯಾಂಟಿಕ್ ಹಾಡಿನ ನಿರೀಕ್ಷೆ

ಮೊದಲ ಹಾಡಿನಲ್ಲಿ ಯಶ್ ಮತ್ತು ಕಿಯಾರಾ ಅಡ್ವಾಣಿ ಜೋಡಿ ಗಮನ ಸೆಳೆದಿತ್ತು. ಇದೀಗ ಹೊಸ ಹಾಡಿನಲ್ಲಿ ಯಶ್ ಮತ್ತು ತಾರಾ ಸುತಾರಿಯಾ ಅವರ ರೊಮ್ಯಾಂಟಿಕ್ ಕೆಮಿಸ್ಟ್ರಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ನಿರೀಕ್ಷೆ ಮೂಡಿದೆ.

ಇದನ್ನೂ ಓದಿ:

ಸಾಹಿತ್ಯದ ಬಗ್ಗೆ ಕುತೂಹಲ

ಚಿತ್ರದ ಮೊದಲ ಹಾಡಿನಂತೆ ಈ ಹಾಡಿಗೂ ಯೋಗರಾಜ್ ಭಟ್ ಸಾಹಿತ್ಯ ಬರೆದಿರಬಹುದೆಂಬ ಚರ್ಚೆ ನಡೆಯುತ್ತಿದೆ. ಹಾಡು ಬಿಡುಗಡೆಯಾದ ಬಳಿಕ ಈ ಬಗ್ಗೆ ಅಧಿಕೃತ ಮಾಹಿತಿ ಸಿಗಲಿದೆ.

ಬಹುತಾರಾಗಣದ ‘ಟಾಕ್ಸಿಕ್’

ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಜೊತೆಗೆ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ನಯನತಾರಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಯಶ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Must Read