October 8, 2026
Thursday, October 8, 2026
spot_img

ಬಾಲಿವುಡ್‌ ನಟಿ ತಾರಾ ಸುತಾರಿಯಾ ಜೊತೆ ಯಶ್‌ ರೊಮ್ಯಾನ್ಸ್‌, ಟಾಕ್ಸಿಕ್‌ನ ʼಮನಮೋಹಕʼ ಹಾಡು ರಿಲೀಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗೀತು ಮೋಹನ್​ದಾಸ್ ನಿರ್ದೇಶನದ ಬಹುನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಕಡೆಯಿಂದ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಈಗಾಗಲೇ ಬಿಡುಗಡೆಯಾಗಿ ಕೋಟ್ಯಂತರ ವೀಕ್ಷಣೆಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸಿದ್ದ ಬೋಲ್ಡ್ ಅಂಡ್ ರೊಮ್ಯಾಂಟಿಕ್ ‘ತಬಾಹಿ’ ಹಾಡಿನ ಬೆನ್ನಲ್ಲೇ, ಚಿತ್ರತಂಡ ಎರಡನೇ ಹಾಡನ್ನು ಬಿಡುಗಡೆ ಮಾಡಿದೆ. 

ಈ ಹಾಡಿನಲ್ಲಿ ಯಶ್‌ ಹಾಗೂ ತಾರಾ ಸುತಾರಿಯಾ ನಡುವಿನ ರೊಮ್ಯಾನ್ಸ್‌ ಕಾಣಿಸುತ್ತಿದ್ದು, ಕಥೆಯ ಸಣ್ಣ ಸಣ್ಣ ಹಿಂಟ್‌ನ್ನು ಬಿಟ್ಟುಕೊಡಲಾಗಿದೆ. ತಬಾಹಿ ಹಾಡಿನಲ್ಲಿ ನಟಿ ಕಿಯಾರಾ ಅಡ್ವಾನಿ ಜೊತೆ ರೊಮ್ಯಾನ್ಸ್‌ ಮಾಡ್ತಿದ್ದ ಯಶ್‌ ಹಾಡಿನ ಕೊನೆಯಲ್ಲಿ ತಾರಾ ಸುತಾರಿಯಾ ಜೊತೆ ಕಾಣಿಸಿಕೊಳ್ತಾರೆ. ಈ ಬಾರಿ ಮನಮೋಹಕ ಹಾಡಿನಲ್ಲಿ ನಯನತಾರಾ ಜೊತೆ ಕಾಣಿಸಿಕೊಂಡಿದ್ದಾರೆ. ಮುಂದಿನ ಹಾಡಿನಲ್ಲಿ ನಟಿ ನಯನತಾರಾ ಜೊತೆ ರೊಮ್ಯಾನ್ಸ್‌ ಮಾಡಬಹುದು ಎಂದು ಫ್ಯಾನ್ಸ್‌ ಊಹಿಸಿದ್ದಾರೆ.

‘ಟಾಕ್ಸಿಕ್’ ಚಿತ್ರದ ಮೊದಲ ಹಾಡಿಗೆ ಸ್ಯಾಂಡಲ್‌ವುಡ್‌ನ ಸ್ಟಾರ್ ಲಿರಿಸಿಸ್ಟ್ ಯೋಗರಾಜ್ ಭಟ್ ಅವರು ಸಾಹಿತ್ಯ ಬರೆದಿದ್ದರು. ಈಗ ಮನಮೋಹಕ ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯ ಬರೆದಿದ್ದಾರೆ. ಈ ಹಾಡನ್ನು ಸಿದ್ದಾರ್ಥ್ ಬಸರೂರ್ ಅವರು ಹಾಡಿದ್ದಾರೆ. ಹಾಡು ಹೇಗಿದೆ ನೀವೇ ನೋಡಿ..

Must Read