August 29, 2026
Saturday, August 29, 2026
spot_img

ವಿಮರ್ಶೆಗಳ ಬಿಸಿ ನಡುವೆ ಥಂಡಾ ಹೊಡೆದ ‘ಟಾಕ್ಸಿಕ್’ ಕಲೆಕ್ಷನ್ ಗೇಮ್: 3ನೇ ದಿನದ ಗಳಿಕೆ ಇಷ್ಟು ಕಡಿಮೆನಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೀತು ಮೋಹನ್ ದಾಸ್ ನಿರ್ದೇಶನದ, ಭರ್ಜರಿ ತಾರಾಗಣದ ಚಿತ್ರ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಆಗಸ್ಟ್ 26 ರಂದು ಅದ್ಭುತ ಓಪನಿಂಗ್ ಪಡೆದುಕೊಂಡಿದೆ. ಬಳಿಕ ಮುಂದಿನ ೨ ದಿನ ಕಲೆಕ್ಷನ್ ನಲ್ಲಿ ಇಳಿಕೆ ಕಂಡುಬಂದಿದೆ.

ಇದ್ಯಾಕೆ ಇಷ್ಟೊಂದು ಕಡಿಮೆ?

ಮೊದಲ ದಿನವೇ 100 ಕೋಟಿ ಗಡಿ ದಾಟಿದ್ದ ಸಿನಿಮಾ, ಎರಡು ಮೂರನೇ ದಿನದಲ್ಲಿ ಭರ್ಜರಿ ಕಲೆಕ್ಷನ್ ಮಾಡಬಹುದು ಎಂಬ ನಂಬಿಕೆ ಇತ್ತು. ಆದ್ರೆ ಮೂರನೇ ದಿನದಂತ್ಯಕ್ಕೆ 26.60 ಕೋಟಿ ರೂ ಗಳಿಸಲಷ್ಟೇ ಶಕ್ತವಾಗಿದೆ. ಇನ್ನು ಟೋಟಲ್ ಕಲೆಕ್ಷನ್ ವಿಷ್ಯಕ್ಕೆ ಬರೋದಾದ್ರೆ ಭಾರತದಲ್ಲಿ ಮೂರು ದಿನದಲ್ಲಿ ಒಟ್ಟು ನೆಟ್ ಕಲೆಕ್ಷನ್ 165.35 ಕೋಟಿ ರೂ ಗೆ ತಲುಪಿದೆ. ಮೂರನೇ ದಿನ ಚಿತ್ರಕ್ಕೆ ಶೇ.26.75ರಷ್ಟು ಆಕ್ಯುಪೆನ್ಸಿ ದಾಖಲಾಗಿದೆ.

ಯಾವ ಭಾಷೆಯಲ್ಲಿ ಎಷ್ಟು ಕಲೆಕ್ಷನ್?

ಟಾಕ್ಸಿಕ್ ನ ಹಿಂದಿ ವರ್ಷನ್ ಕಥೆಗೆ ಬರೋದಾದ್ರೆ ಮೂರನೇ ದಿನ ಸುಮಾರು 19.15 ಕೋಟಿ ರೂ ಬಾಚಿಕೊಂಡಿದ್ದು, ಕನ್ನಡ ವರ್ಷನ್‌ 5 ಕೋಟಿ ಕೊಡುಗೆ ನೀಡಿದೆ. ತೆಲುಗು, ತಮಿಳು ಹಾಗೂ ಮಲಯಾಳಂ ವರ್ಷನ್‌ಗಳೂ ಚಿತ್ರದ ಒಟ್ಟು ಗಳಿಕೆಗೆ ತಕ್ಕಮಟ್ಟಿನ ಕೊಡುಗೆ ನೀಡಿವೆ ಅಂದರೂ ತಪ್ಪಾಗಲ್ಲ.

ಇದನ್ನೂ ಓದಿ:

ವರ್ಲ್ಡ್‌ವೈಡ್ 221 ಕೋಟಿ ರೂ ದಾಟಿದ ‘ಟಾಕ್ಸಿಕ್’

ವಿದೇಶಗಳಲ್ಲಿ ಭರ್ಜರಿ ಪ್ರಚಾರ ನಡೆಸಿದ್ದ ಚಿತ್ರ ತಂಡಕ್ಕೆ ಮೋಸ ಆಗದಂತೆ ಗಲ್ಲಾಪೆಟ್ಟಿಗೆ ತುಂಬಿಸಿವೆ. ಮೂರು ದಿನಗಳ ಅಂತ್ಯಕ್ಕೆ ವರ್ಲ್ಡ್‌ವೈಡ್ ಕಲೆಕ್ಷನ್ 221.45 ಕೋಟಿ ತಲುಪಿದೆ ಎಂದು ಬಾಕ್ಸ್ ಆಫೀಸ್ ಅಂದಾಜುಗಳು ತಿಳಿಸಿವೆ. ವಿದೇಶಿ ಮಾರುಕಟ್ಟೆಯಿಂದ ಮೂರನೇ ದಿನ ಸುಮಾರು 4 ಕೋಟಿ ಗಳಿಕೆಯಾಗಿದೆ ಎಂದು ವರದಿಯಾಗಿದೆ.

ಕೈ ಹಿಡಿಯುತ್ತಾ ವೀಕೆಂಡ್ ?

ಒಟ್ಟಾರೆ, ಆರಂಭಿಕ ದಿನಗಳ ಭರ್ಜರಿ ಓಪನಿಂಗ್ ಬಳಿಕ ‘ಟಾಕ್ಸಿಕ್’ ಕಲೆಕ್ಷನ್‌ನಲ್ಲಿ ಇಳಿಕೆ ಕಂಡಿದ್ದರೂ, ನಕಾರಾತ್ಮಕ ವಿಮರ್ಶೆಗಳ ನಡುವೆಯೂ ಮೂರು ದಿನಗಳಲ್ಲಿ 165 ಕೋಟಿಗೂ ಹೆಚ್ಚು ಗಳಿಸಿರುವುದು ಚಿತ್ರತಂಡಕ್ಕೆ ಸಮಾಧಾನ ತಂದಿದೆ. ಇದೀಗ ಶನಿವಾರ ಮತ್ತು ಭಾನುವಾರದ ಕಲೆಕ್ಷನ್‌ ಚಿತ್ರಕ್ಕೆ ನಿರ್ಣಾಯಕವಾಗಲಿವೆ ಎಂದರೂ ತಪ್ಪಾಗಲಾರದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !