September 1, 2026
Tuesday, September 1, 2026
spot_img

ಲೈವ್ ವಿಡಿಯೋ ಮಾಡುತ್ತಲೇ ತುಂಗಭದ್ರಾ ನದಿಗೆ ಹಾರಿದ ಯುವಕ: ಆತ್ಮಹ*ತ್ಯೆಗೆ ಕಾರಣ ನಿಗೂಢ

ಹೊಸದಿಗಂತ ವರದಿ ಹಾವೇರಿ

ಲೈವ್ ವಿಡಿಯೋ ಮಾಡುತ್ತಲೇ ತುಂಗಭದ್ರಾ ನದಿಗೆ ಹಾರಿ ಯುವಕ ಆತ್ಮಹತ್ಯೆ ಮಾಡಿಕೊಡ ಘಟನೆ ನಡೆದಿದೆ.

ಮದ್ಯ ಸೇವಿಸಿದ ಅಮಲಿನಲ್ಲಿದ್ದ ಯುವಕ ಮೊಬೈಲ್‌ನಲ್ಲಿ ಲೈವ್ ವಿಡಿಯೋ ಮಾಡುತ್ತಿರವಾಗಲೇ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆಗೆ ಮುಂದಾಗಿದ್ದಾನೆ.

ಲೈವ್ ನಲ್ಲಿ ನದಿಗೆ ಹಾರಿದ ಯುವಕನನ್ನು ಬೀರೇಶ ಚಿನ್ಮಿಕಟ್ಟಿ (31) ಎನ್ನಲಾಗಿದ್ದು, ಯಾವ ಊರಿನವರು ಎಂಬುದು ಇನ್ನೂ ತಿಳಿದು ಬಂದಿಲ್ಲ.

ಇದನ್ನೂ ಓದಿ:

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ಕಲವೆತ್ತು ಗ್ರಾಮದ ಬಳಿ ಇರುವ ತುಂಗಭದ್ರಾ ನದಿಯ ಬಳಿ ಬಂದಿದ್ದ ಬೀರೇಶ, ಮೊದಲೇ ಮದ್ಯ ಸೇವಿಸಿದ್ದ ಎನ್ನಲಾಗಿದೆ.

ಈ ವೇಳೆ ಮೊಬೈಲ್‌ನಲ್ಲಿ ಲೈವ್ ವಿಡಿಯೋ ಮಾಡುತ್ತಿದ್ದ ಆತ ಏಕಾಏಕಿ ನದಿಗೆ ಹಾರಿದ್ದಾನೆ. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರಿಂದ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ಕುಮಾರಪಟ್ಟಣ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !