September 1, 2026
Tuesday, September 1, 2026
spot_img

ಹಾರ್ದಿಕ್ ಪಾಂಡ್ಯ ಕಂಬ್ಯಾಕ್‌ಗೆ ಮತ್ತೆ ಬ್ರೇಕ್: ಅಫ್ಘಾನಿಸ್ತಾನ ಸರಣಿ ಆಡೋದು ಡೌಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಕ್ರಿಕೆಟ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕಮ್‌ಬ್ಯಾಕ್ ಯೋಜನೆಗೆ ವಿಘ್ನ ಎದುರಾಗಿದೆ. ತರಬೇತಿ ಪಡೆಯುತ್ತಿದ್ದ ವೇಳೆ ಕಾಲಿನಲ್ಲಿ ಸ್ನಾಯು ಸೆಳೆತ ಕಾಣಿಸಿಕೊಂಡಿದ್ದು, ಹೀಗಾಗಿ ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಟಿ20 ಸರಣಿಗೆ ಅವರು ಸಿಗೋದು ಡೌಟ್ ಎನ್ನಲಾಗಿದೆ.

ಫಿಟ್ ಆಗಿದ್ದ ಪಾಂಡ್ಯ

ಇತ್ತೀಚಿಗೆ ಹಾರ್ದಿಕ್ ಪಾಂಡ್ಯ ಯಾವುದೇ ಅರೋಗ್ಯ ಸಮಸ್ಯೆ ಇಲ್ಲದೆ ಫುಲ್ ಫಿಟ್ ಆಗಿ ತರಬೇತಿ ನಡೆಸುತ್ತಿದ್ದರು. ಆದರೆ ಈಗ ಕಾಲಿನಲ್ಲಿ ಕಾಣಿಸಿಕೊಂಡ ಸ್ನಾಯು ಸೆಳೆತದಿಂದ ಬೌಲಿಂಗ್‌ಗೆ ತಾತ್ಕಾಲಿಕ ವಿರಾಮ ನೀಡಲಾಗಿದೆ. ಸದ್ಯ ಸಂಪೂರ್ಣ ಫಿಟ್‌ನೆಸ್ ಖಚಿತವಾದ ಬಳಿಕವಷ್ಟೇ ಕ್ರಿಕೆಟ್‌ಗೆ ಮರಳಲು ಅವಕಾಶ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಇದನ್ನೂ ಓದಿ:

2027ರ ವಿಶ್ವಕಪ್‌ಗೆ ಪಾಂಡ್ಯ ಪ್ರಮುಖ ಅಸ್ತ್ರ

2027ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ದೃಷ್ಟಿಯಿಂದ ಹಾರ್ದಿಕ್ ತಂಡಕ್ಕೆ ಪ್ರಮುಖ ಆಟಗಾರರಾಗಿದ್ದು, ಬ್ಯಾಟಿಂಗ್ ಜೊತೆಗೆ ವೇಗದ ಬೌಲಿಂಗ್ ನೀಡುವ ಅವರ ಸಾಮರ್ಥ್ಯ ಭಾರತ ತಂಡಕ್ಕೆ ಅವಶ್ಯಕವಾಗಿದೆ. ಹೀಗಾಗಿ ಅವರ ಫಿಟ್ನೆಸ್ ಬಗ್ಗೆ ಬಿಸಿಸಿಐ ಯಾವುದೇ ರೀತಿಯ ಆತುರದ ನಿರ್ಧಾರ ಕೈಗೊಳ್ಳಲು ತಯಾರಿಲ್ಲ.

ಅಫ್ಘಾನ್ ಸರಣಿಗೆ ಗಾಯದ ಬರೆ

ಹಾರ್ದಿಕ್ ಸ್ನಾಯು ಸೆಳೆತದಿಂದ ಅಗತ್ಯದ ಫಿಟ್ನೆಸ್ ತಲುಪಲು ಸ್ವಲ್ಪ ಸಮಯ ಬೇಕಾಗಬಹುದು ಎನ್ನಲಾಗಿದ್ದು, ಇತ್ತ ಜಸ್ಪ್ರೀತ್ ಬುಮ್ರಾ, ವಾಷಿಂಗ್ಟನ್ ಸುಂದರ್, ನಿತೀಶ್ ಕುಮಾರ್ ರೆಡ್ಡಿ ಹಾಗೂ ಸಾಯಿ ಸುದರ್ಶನ್ ಸೇರಿದಂತೆ ಹಲವು ಪ್ರಮುಖ ಆಟಗಾರರೂ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರಷ್ಟೇ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !