October 14, 2026
Wednesday, October 14, 2026
spot_img

ತಾಯಿ-ಮಗಳ ನಡುವೆ ಜಗಳ: ಕೆರೆಗೆ ಬಿದ್ದು ಆತ್ಮ*ಹತ್ಯೆಗೆ ಶರಣು

ಹೊಸದಿಗಂತ ವರದಿ ಮಡಿಕೇರಿ:

ತಾಯಿ ಹಾಗೂ ಅಪ್ರಾಪ್ತ ಪುತ್ರಿ ಕೆರೆಗೆ ಬಿದ್ದು ಸಾವಿಗೀಡಾಗಿರುವ ದುರಂತ ಘಟನೆ ಭಾಗಮಂಡಲ ಪೊಲೀಸ್ ಠಾಣೆ ವ್ಯಾಪ್ತಿಯ ತಲಕಾವೇರಿ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ತಲಕಾವೇರಿ ಗ್ರಾಮದ ಪ್ರೇಮಾ (45) ಹಾಗೂ ಅವರ ಪುತ್ರಿ ಪ್ರಿಯಾಂಕ (14) ಮೃತರು.

ಮನೆಯಲ್ಲಿ ತಾಯಿ–ಮಗಳ ನಡುವೆ ಜಗಳ ನಡೆದಿದ್ದು, ಈ ಸಂದರ್ಭ ತಾನು ಕೆರೆಗೆ ಹಾರುವುದಾಗಿ ಹೇಳಿ ಪ್ರಿಯಾಂಕ ಮನೆಯಿಂದ ಓಡಿದ್ದಾಳೆ ಎನ್ನಲಾಗಿದೆ. ಮಗಳ ಹಿಂದೆ ತಾಯಿ ಪ್ರೇಮಾ ಕೂಡಾ ಓಡಿದ್ದು, ಪ್ರಿಯಾಂಕ ಕೆರೆಗೆ ಹಾರಿದ ಬಳಿಕ ಆಕೆಯನ್ನು ರಕ್ಷಿಸುವ ಉದ್ದೇಶದಿಂದ ತಾಯಿಯೂ ಕೆರೆಗೆ ಹಾರಿದ್ದಾರೆ ಎಂದು ಹೇಳಲಾಗಿದೆ.

ಇಬ್ಬರನ್ನೂ ರಕ್ಷಿಸಲು ಸ್ಥಳೀಯರು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಇಬ್ಬರ ಮೃತದೇಹಗಳನ್ನು ಕೆರೆಯಿಂದ ಹೊರತೆಗೆದಿದ್ದಾರೆ. ಘಟನೆ ಕುರಿತು ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Must Read