ಬೇಕಾಗುವ ಪದಾರ್ಥಗಳು
ಡಾರ್ಕ್ ಚಾಕೊಲೇಟ್
ಕಂಡೆನ್ಸ್ಡ್ ಮಿಲ್ಕ್
ಬೆಣ್ಣೆ
ವೆನಿಲಾ ಎಸೆನ್ಸ್
ಡ್ರೈ ಫ್ರೂಟ್ಸ್
ಮಾಡುವ ವಿಧಾನ
ಒಂದು ಪಾತ್ರೆಗೆ ಹೆಚ್ಚಿದ ಚಾಕೊಲೇಟ್, ಕಂಡೆನ್ಸ್ಡ್ ಮಿಲ್ಕ್ ಮತ್ತು ಬೆಣ್ಣೆ ಹಾಕಿ. ಸಣ್ಣ ಉರಿಯಲ್ಲಿ ಈ ಮಿಶ್ರಣವನ್ನು ಮಿಕ್ಸ್ ಮಾಡಿ, ಚಾಕೊಲೇಟ್ ಪೂರ್ತಿಯಾಗಿ ಕರಗಿಸಿ. ಚಾಕೊಲೇಟ್ ಕರಗಿದ ತಕ್ಷಣ ಒಲೆಯಿಂದ ಕೆಳಗಿಳಿಸಿ, ವೆನಿಲಾ ಎಸೆನ್ಸ್ ಮತ್ತು ಕಟ್ ಮಾಡಿದ ಡ್ರೈ ಫ್ರೂಟ್ಸ್ ಸೇರಿಸಿ ಮಿಕ್ಸ್ ಮಾಡಿ. ಬೆಣ್ಣೆ ಸವರಿದ ಅಥವಾ ಬಟರ್ ಪೇಪರ್ ಹಾಕಿದ ಟ್ರೇಗೆ ಈ ಬಿಸಿ ಮಿಶ್ರಣವನ್ನು ಹಾಕಿ ಹರಡಿ. ಇದನ್ನು 2 ರಿಂದ 3 ಗಂಟೆಗಳ ಕಾಲ ಫ್ರಿಡ್ಜ್ನಲ್ಲಿ ಇಡಿ. ಫಡ್ಜ್ ಗಟ್ಟಿಯಾದ ಮೇಲೆ ಹೊರತೆಗೆದು ನಿಮಗಿಷ್ಟವಾದ ಚೌಕಾಕಾರದ ಪೀಸ್ಗಳಾಗಿ ಕಟ್ ಮಾಡಿದರೆ ಬಾಯಲ್ಲಿ ಇಟ್ಟರೆ ಕರಗುವ ಚಾಕೊಲೇಟ್ ಫಡ್ಜ್ ರೆಡಿ!



