ಹೊಸದಿಗಂತ ವರದಿ ಬೇಲೂರು:
ತಾಲೂಕಿನ ಯಮಸಂಧಿ ಗ್ರಾಮದ ಸಚಿನ್ ವೈ.ಸಿ. ಹಾಗೂ ಸಾಧನ ಎಸ್.ಬಿ. ದಂಪತಿ ಪುತ್ರಿ ಶ್ರೇಯಾ ವೈ.ಎಸ್. ಅವರು ಪೆನಾಂಗ್‌ನಲ್ಲಿ ನಡೆದ ಏಷ್ಯಾ ಪೆಸಿಫಿಕ್ ಡೆಫ್ (ಕಿವುಡರ) ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದು ಭಾರತ, ರಾಜ್ಯ ಹಾಗೂ ಹಾಸನ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಬೇಲೂರಿನ ಪೂರ್ಣಪ್ರಜ್ಞಾ ಶಾಲೆಯಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ.76 ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಉತ್ತಿರ್ಣರಾಗಿರುವ ಶ್ರೇಯಾ, ಪ್ರಸ್ತುತ ಬೇಲೂರಿನ ವಿದ್ಯಾವಿಕಾಸ್ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಪೆನಾಂಗ್‌ನಲ್ಲಿ ನಡೆದ ಚಾಂಪಿಯನ್‌ಶಿಪ್‌ನಲ್ಲಿ ಶ್ರೇಯಾ ಅವರ ಸಾಧನೆಗೆ ಶಾಲೆ ಹಾಗೂ ಕಾಲೇಜಿನ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದ್ದು, ಮುಂದಿನ ಮಿಕ್ಸೆಡ್ ಡಬಲ್ಸ್ ಹಾಗೂ ಕ್ಲಾಸಿಕಲ್ ವಿಭಾಗದ ಸುತ್ತುಗಳಲ್ಲಿ ಉತ್ತಮ ಸಾಧನೆ ಮಾಡುವಂತೆ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ:
ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಒಟ್ಟು ಮೂರು ಪದಕಗಳು ಲಭಿಸಿವೆ. ಕರ್ನಾಟಕ ಅಂಬಿಕಾ ನಾಗಪ್ಪ ಮಾರಗಿ ಅವರು ಆರು ಅಂಕಗಳೊಂದಿಗೆ ಬೆಳ್ಳಿ ಪದಕ ಹಾಗೂ ಪಶ್ಚಿಮ ಬಂಗಾಳದ ಅಂಕಿತ್ ಗಂಗೂಲಿ ಅವರು ಎಂಟು ಅಂಕಗಳೊಂದಿಗೆ ಕಂಚಿನ ಪದಕ ಗೆದ್ದಿದ್ದಾರೆ. ಶ್ರೇಯಾ ಅವರ ಚಿನ್ನದ ಪದಕ ಸೇರಿದಂತೆ ಮೂರು ಪದಕಗಳೊಂದಿಗೆ ಭಾರತೀಯ ಕ್ರೀಡಾಪಟುಗಳು ದೇಶದ ಕೀರ್ತಿ ಹೆಚ್ಚಿಸಿದ್ದಾರೆ.



