June 7, 2026
Sunday, June 7, 2026
spot_img

ಭಯವಲ್ಲ, ಭರವಸೆಯ ಸ್ಪರ್ಶ: ಕಲಬುರಗಿಯಲ್ಲಿ ಮಕ್ಕಳ ಸ್ನೇಹಿ ಪೊಲೀಸ್ ಕೇಂದ್ರ ಆರಂಭ

ಹೊಸದಿಗಂತ ವರದಿ ಕಲಬುರಗಿ:

ಮಕ್ಕಳಿಗೆ ಸುರಕ್ಷಿತ, ಭಯಮುಕ್ತ ಮತ್ತು ಸ್ನೇಹಪರ ವಾತಾವರಣ ಒದಗಿಸುವ ಉದ್ದೇಶದಿಂದ ಕಲಬುರಗಿ ಜಿಲ್ಲಾ ಪೊಲೀಸ್ ಇಲಾಖೆ ನಗರದ ಡಿಐಜಿ ಕಚೇರಿ ಆವರಣದಲ್ಲಿ ಮಕ್ಕಳ ಸ್ನೇಹಿ ಪೊಲೀಸ್ ಕೇಂದ್ರವನ್ನು ಆರಂಭಿಸಿದೆ. ಈ ಕೇಂದ್ರವನ್ನು ಈಶಾನ್ಯ ವಲಯದ ಡಿಐಜಿಪಿ ಶಾಂತನು ಸಿನ್ಹಾ ಉದ್ಘಾಟಿಸಿದರು.

ಸಂಕಷ್ಟದಲ್ಲಿರುವ ಮಕ್ಕಳಿಗೆ ನೆರವಿನ ವ್ಯವಸ್ಥೆ

ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ-2015ರ ಅನ್ವಯ ಸ್ಥಾಪಿಸಲಾದ ಈ ಕೇಂದ್ರದಲ್ಲಿ ವಿವಿಧ ಸಮಸ್ಯೆಗಳಿಗೆ ಒಳಗಾದ ಮಕ್ಕಳಿಗೆ ಕಾನೂನು ಸಲಹೆ, ಸಮಾಲೋಚನೆ, ರಕ್ಷಣಾತ್ಮಕ ಸೇವೆಗಳು ಹಾಗೂ ಅಗತ್ಯ ಸಹಾಯವನ್ನು ಒದಗಿಸಲಾಗುತ್ತದೆ ಎಂದು ಶಾಂತನು ಸಿನ್ಹಾ ತಿಳಿಸಿದರು.

ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ತ್ವರಿತ ಸ್ಪಂದನೆ

ಮಕ್ಕಳ ಮೇಲಿನ ಅಪರಾಧ, ಶೋಷಣೆ, ದೌರ್ಜನ್ಯ ಹಾಗೂ ಮಕ್ಕಳ ಹಕ್ಕುಗಳ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳಿಗೆ ತಕ್ಷಣ ಸ್ಪಂದಿಸುವ ವ್ಯವಸ್ಥೆಯನ್ನೂ ಈ ಕೇಂದ್ರದಲ್ಲಿ ಕಲ್ಪಿಸಲಾಗಿದೆ.

ಇದನ್ನೂ ಓದಿ:

ಭಯಮುಕ್ತ ವಾತಾವರಣಕ್ಕೆ ಆದ್ಯತೆ

ಪೊಲೀಸ್ ಠಾಣೆಗೆ ಬರುವ ಮಕ್ಕಳಲ್ಲಿ ಆತ್ಮವಿಶ್ವಾಸ ಬೆಳೆಸುವ ಉದ್ದೇಶದಿಂದ ಕೇಂದ್ರವನ್ನು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಮಕ್ಕಳೊಂದಿಗೆ ಸಂವೇದನಾಶೀಲವಾಗಿ ವರ್ತಿಸಲು ಅಗತ್ಯ ವ್ಯವಸ್ಥೆಗಳನ್ನು ರೂಪಿಸಲಾಗಿದೆ.

ಅಧಿಕಾರಿಗಳ ಉಪಸ್ಥಿತಿ

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಡಿಎಸ್ಪಿ ಶಂಕರಗೌಡ ಪಾಟೀಲ, ಪಿಐ ಪಿ.ಎಸ್. ವನಂಜಕರ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !