May 11, 2026
Monday, May 11, 2026
spot_img

ಕಾಶ್ಮೀರ ಭಾರತದ ಅವಿಭಾಜ್ಯ ಅಂಗ: ಸಂಪೂರ್ಣ ನಕ್ಷೆ ಬಿಡುಗಡೆ ಮಾಡಿದ ಅಮೆರಿಕ!

ಹೊಸ ದಿಗಂತ ಡಿಜಿಟಲ್ ಡೆಸ್ಕ್: :

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ತಂಡವು ಭಾರತದೊಂದಿಗಿನ ವ್ಯಾಪಾರದ ವರ್ಣನೆಯನ್ನು ಮಾಡುವ ಭಾರತದ ಸಂಪೂರ್ಣ ನಕ್ಷೆಯನ್ನು ಬಿಡುಗಡೆ ಮಾಡಿದೆ.

ಈ ನಕ್ಷೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರ , ಚೀನಾ ತನ್ನದೆಂದು ಹೇಳುವ ಭಾರತದ ಭೂಭಾಗ ಅಕ್ಸಾಯ್ ಚಿನ್ ಸೇರಿದಂತೆ ಸಂಪೂರ್ಣ ಜಮ್ಮು ಮತ್ತು ಕಾಶ್ಮೀರವನ್ನು ಒಳಗೊಂಡಿದೆ.

ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿಯು ವ್ಯಾಪಾರ ಒಪ್ಪಂದದ ವಿವರಗಳನ್ನು ಭಾರತದ ನಕ್ಷೆಯ ಮೂಲಕ ವರ್ಣಿಸಿದೆ.

ವ್ಯಾಪಾರ ಒಪ್ಪಂದ ಸಂಬಂಧ ‘ಯುನೈಟೆಡ್ ಸ್ಟೇಟ್ಸ್ ಆಫ್ ಟ್ರೇಡ್ ರೆಪ್ರೆಸೆಂಟೇಟಿವ್’ ಬಿಡುಗಡೆ ಮಾಡಿರುವ ಭಾರತದ ಭೂಪಟದಲ್ಲಿ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಬಿಂಬಿಸಿದೆ. ಈ ನಕ್ಷೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಭಾರತದ ಭಾಗವಾಗಿ ತೋರಿಸಲಾಗಿದೆ. ಆ ಮೂಲಕ ಪಾಕಿಸ್ತಾನಕ್ಕೆ ಸದ್ದಿಲ್ಲದೆ ತಿರುಗೇಟು ನೀಡಿದೆ.

ಇತ್ತೀಚೆಗೆ ಭಾರತ-ಯುಎಸ್ ಮಧ್ಯಂತರ ವ್ಯಾಪಾರ ಒಪ್ಪಂದವನ್ನು ಘೋಷಿಸಲಾಯಿತು. ಇದರೊಂದಿಗೆ, ಅಮೆರಿಕ ಭಾರತದ ಅಧಿಕೃತ ನಕ್ಷೆಯನ್ನು ಬಿಡುಗಡೆ ಮಾಡಿದ್ದು, ಅದು ಪ್ರಮುಖ ಸಂದೇಶ ನೀಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !