September 4, 2026
Friday, September 4, 2026
spot_img

ಸಾಧನೆಗೆ ಇನ್ನೊಂದು ಹೆಸರೇ ಮೋದಿ : ಸಂಸದ ಗೋವಿಂದ ಎಂ. ಕಾರಜೋಳ ಶ್ಲಾಘನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಧಾನಿ ನರೇಂದ್ರ ಮೋದಿಯ 12 ವರ್ಷಗಳ ಮೋದಿ ಸಾಧನೆ ಪರ್ವದ ವಿರುದ್ಧ ಅಪಪ್ರಚಾರಕ್ಕೆ ತಕ್ಕ ಉತ್ತರ ನೀಡಲು ಮನೆ ಮನೆ ಹಾಗೂ ಮನ ಮನಗಳಿಗೆ ಮೋದಿ ಸರ್ಕಾರದ ಸಾಧನೆ ತಲುಪಿಸಲು ಅಂಕಿ ಅಂಶಗಳ ಸಾಕ್ಷಿ ಸಮೇತದ ಕಿರುಹೊತ್ತಿಗೆಗಳನ್ನು ಬಿಡುಗಡೆ ಮಾಡಲಾಯಿತು.

ಮನೆ ಮನೆಗೆ ಹಂಚುವ ಕಾರ್ಯದ ಸಾಂಕೇತಿಕ ಉದ್ಘಾಟನೆಯನ್ನು ಧವಳಗಿರಿಯ ಶ್ರೀ ಕ್ಷಿಪ್ರ ಪ್ರಸಾದ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಸಂಸದರಾದ ಗೋವಿಂದ ಎಂ. ಕಾರಜೋಳ ನೆರವೇರಿಸಿದರು.

ಇದನ್ನೂ ಓದಿ:

ಬಡಾವಣೆಯ ನಾಗರೀಕರಾದ ಹೊರಕೆ ರಂಗಪ್ಪ, ಸಿದ್ದೇಶ್ ಹಾಗೂ ಷಣ್ಮುಖಪ್ಪನ ಮನೆಗಳಿಗೆ ಸಂಸದ ಗೋವಿಂದ ಎಂ. ಕಾರಜೋಳ ಖುದ್ದಾಗಿ ಭೇಟಿ ನೀಡಿ ಪುಸ್ತಕಗಳನ್ನು ನೀಡಿ ಜಾಗೃತಿ ಮೂಡಿಸಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಟಿ. ಕಮಾರಸ್ವಾಮಿ, ಉಪಾಧ್ಯಕ್ಷ ಡಾ.ಸಿದ್ಧಾರ್ಥ್ ಗುಂಡಾರ್ಪಿ, ನಗರಾಧ್ಯಕ್ಷ ಲೋಕೇಶ, ಮಂಜುನಾಥ್ ಮೊಳಕಾಲ್ಮೂರು, ದವಳಗಿರಿ ಬಡಾವಣೆ ನಿವಾಸಿಗಳಾದ ಗುರುಮೂರ್ತಿ, ಸಿ.ಜಿ. ಶ್ರೀನಿವಾಸ್, ರಾಜಣ್ಣ, ಶಶಿಕಿರಣ್, ಶ್ರೀಕಾಂತ್, ತೇಜೋಮೂರ್ತಿ ಮತ್ತಿತರ ಹಿರಿಯರು ಈ ಸಂದರ್ಭದಲ್ಲಿ ಹಾಜರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !