ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಉತ್ತರ ಭಾಗದ ನಿವಾಸಿಗಳಿಗೆ ಇಂದು ಕೊಂಚ ಪವರ್ ಟೆನ್ಷನ್ ಎದುರಾಗಲಿದೆ. ಯಲಹಂಕದ 66/11 ಕೆವಿ ಸಬ್‌ಸ್ಟೇಷನ್‌ನಲ್ಲಿ KPTCL ತುರ್ತು ದುರಸ್ತಿ ಮತ್ತು ನಿರ್ವಹಣಾ ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಈ ಕಾರಣದಿಂದಾಗಿ ಹೆಬ್ಬಾಳ ವಿಭಾಗದ ಸಿ-7 ಉಪ ವಿಭಾಗದ ವ್ಯಾಪ್ತಿಯಲ್ಲಿ ಇಡೀ ದಿನ ವಿದ್ಯುತ್ ಪೂರೈಕೆಯಲ್ಲಿ ಏರುಪೇರಾಗಲಿದೆ.
ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಪವರ್ ಕಟ್
ಇಂದು ಬೆಳಗ್ಗೆ 9 ಗಂಟೆಗೆ ಆರಂಭವಾಗಿರುವ ಈ ಕಾಮಗಾರಿಯು ಸಂಜೆ 6 ಗಂಟೆಯವರೆಗೆ ಮುಂದುವರಿಯಲಿದೆ. ವಿಶೇಷವೆಂದರೆ, ಈ ಸಮಯದಲ್ಲಿ ಸಂಪೂರ್ಣವಾಗಿ ಪವರ್ ಕಟ್ ಆಗುವುದಿಲ್ಲ. ಬದಲಿಗೆ ಕರೆಂಟ್ ಪದೇ ಪದೇ ಬಂದು ಹೋಗುತ್ತದೆ. ಇದರಿಂದಾಗಿ ವರ್ಕ್ ಫ್ರಮ್ ಹೋಮ್ ಮಾಡುವವರಿಗೆ, ಕಚೇರಿ ಹಾಗೂ ಅಂಗಡಿ ಮುಂಗಟ್ಟುಗಳ ದೈನಂದಿನ ಕೆಲಸಗಳಿಗೆ ಸ್ವಲ್ಪ ಮಟ್ಟಿನ ಅಡಚಣೆ ಉಂಟಾಗಬಹುದು.
ವಿದ್ಯುತ್ ವ್ಯತ್ಯಯ ಎದುರಿಸಲಿರುವ ಏರಿಯಾಗಳು
ಯಲಹಂಕ ನ್ಯೂ ಟೌನ್ (208 ಮತ್ತು 407), ಬಿ ಸೆಕ್ಟರ್, ಕೆಎಂಎಫ್, ಅಲ್ಲಾಳಸಂದ್ರ, ಸಿಬಿ ಸಾಂದ್ರ, ಶಾರದನಗರ, ಮಾರುತಿನಗರ, ಜನಪ್ರಿಯ, ಕೋಗಿಲು, ಬಿಬಿ ರಸ್ತೆ, ಬಾಗಲೂರು ಕ್ರಾಸ್, ವೆಂಕಟಾಲ್, ಕಟ್ಟಿಗೇನಹಳ್ಳಿ, ಪಾಲನಹಳ್ಳಿ, ದ್ವಾರಖಾನಗರ, ಎಎಂಎಸ್ ಲೇಔಟ್, ಡಿಫೆನ್ಸ್ ಲೇಔಟ್, ಟೀಚರ್ಸ್ ಲೇಔಟ್, ರಾಘವೇಂದ್ರ ಲೇಔಟ್, ಎಚ್‌ಎಂಟಿ ಲೇಔಟ್, ಬಾಲಾಜಿ ಲೇಔಟ್, ಸ್ವಾಗತ್ ಲೇಔಟ್, ದುರ್ಗಾ ಲೇಔಟ್, ಬಿಇಎಲ್ 6ನೇ ಬ್ಲಾಕ್, ನರಸೀಪುರ ಲೇಔಟ್, ಎಚ್‌ಎಂಟಿ 3ನೇ ಮತ್ತು 4ನೇ ಬ್ಲಾಕ್, ಎಸ್ಕಾರ್ಟ್ ಲೇಔಟ್, ತಿರುಮಲ ನಗರ, ಅಕ್ಷಯ ನಗರ, ಕಾವೇರಿ ಲೇಔಟ್, ದೊಡ್ಡಬೆಟ್ಟಹಳ್ಳಿ, ಚಿಕ್ಕಬೆಟ್ಟಹಳ್ಳಿ, ಆದಿತ್ಯನಗರ, ಅಟ್ಟೂರು ಲೇಔಟ್, ಸಂತೋಷ್ ನಗರ, ಮುನೇಶ್ವರ ಲೇಔಟ್, ಎಂ.ಎಸ್.ಪಾಳ್ಯ, ಹವ್ಯಕನಗರ ಹಾಗೂ ಸುತ್ತಮುತ್ತಲಿನ ಏರಿಯಾಗಳಲ್ಲಿ ಈ ಸಮಸ್ಯೆ ಎದುರಾಗಲಿದೆ.
ಇದನ್ನೂ ಓದಿ:
ಸಾರ್ವಜನಿಕರಿಗೆ ಸಲಹೆ
ಈ ಭಾಗದಲ್ಲಿ ವಾಸಿಸುವ ಸಾರ್ವಜನಿಕರು ಹಾಗೂ ವ್ಯಾಪಾರಸ್ಥರು ಮೊಬೈಲ್, ಲ್ಯಾಪ್‌ಟಾಪ್ ಹಾಗೂ ಪವರ್ ಬ್ಯಾಂಕ್‌ಗಳನ್ನು ಮುಂಚಿತವಾಗಿಯೇ ಚಾರ್ಜ್ ಮಾಡಿಟ್ಟುಕೊಳ್ಳುವುದು ಒಳಿತು. ಕಚೇರಿ ಮತ್ತು ಆಸ್ಪತ್ರೆಗಳಂತಹ ಅಗತ್ಯ ಸೇವೆಗಳ ಜಾಗದಲ್ಲಿ ಜನರೇಟರ್ ಅಥವಾ ಇನ್ವರ್ಟರ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳಿ.
ಮುಂದಿನ ದಿನಗಳಲ್ಲಿ ಎದುರಾಗಬಹುದಾದ ದೊಡ್ಡ ಮಟ್ಟದ ತಾಂತ್ರಿಕ ದೋಷಗಳನ್ನು ತಪ್ಪಿಸಲು ಈ ತಾತ್ಕಾಲಿಕ ನಿರ್ವಹಣೆ ಅನಿವಾರ್ಯವಾಗಿದೆ. ಅಧಿಕಾರಿಗಳು ಸಂಜೆ 6 ಗಂಟೆಯೊಳಗೆ ಕೆಲಸ ಮುಗಿಸಿ ಪೂರೈಕೆಯನ್ನು ಸಹಜ ಸ್ಥಿತಿಗೆ ತರಲು ಶ್ರಮಿಸುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕಾಗಿ ವಿನಂತಿಸಲಾಗಿದೆ.



