October 10, 2026
Saturday, October 10, 2026
spot_img

ಅಮೆರಿಕದ ಆಮದುದಾರರಿಗೆ ‘ಬಿಗ್ ಮಂಡೇ’ ಗಿಫ್ಟ್: 166 ಬಿಲಿಯನ್ ಡಾಲರ್ ಸುಂಕದ ಹಣ ವಾಪಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಇತಿಹಾಸದಲ್ಲೇ ಇದೊಂದು ದೊಡ್ಡ ಆರ್ಥಿಕ ಬೆಳವಣಿಗೆಯಾಗಿದ್ದು, ಇದನ್ನು ‘ಬಿಗ್ ಮಂಡೇ’ ಎಂದು ಕರೆಯಲಾಗುತ್ತಿದೆ. ಕಳೆದ ವರ್ಷ ಟ್ರಂಪ್ ಸರ್ಕಾರ ಚೀನಾ ಸೇರಿದಂತೆ ಹಲವು ದೇಶಗಳ ಮೇಲೆ ಹೇರಿದ್ದ ಭಾರಿ ಆಮದು ಸುಂಕವನ್ನು ಅಮೆರಿಕದ ಸುಪ್ರೀಂ ಕೋರ್ಟ್ ಕಾನೂನುಬಾಹಿರ ಎಂದು ಘೋಷಿಸಿದೆ.

“ತೆರಿಗೆ ವಿಧಿಸುವ ಅಧಿಕಾರ ಇರುವುದು ಸಂಸತ್ತಿಗೇ ಹೊರತು ಅಧ್ಯಕ್ಷರಿಗಲ್ಲ” ಎಂಬ ಮಹತ್ವದ ತೀರ್ಪಿನ ಅನ್ವಯ, ಸರ್ಕಾರವು ವಸೂಲಿ ಮಾಡಿದ್ದ 166 ಬಿಲಿಯನ್ ಡಾಲರ್ ಹಣವನ್ನು ಈಗ ಉದ್ಯಮಿಗಳಿಗೆ ವಾಪಸ್ ನೀಡುತ್ತಿದೆ.

ಸುಮಾರು 3,30,000 ಆಮದುದಾರರು ಇದರ ಪ್ರಯೋಜನ ಪಡೆಯಲಿದ್ದು, ಇದಕ್ಕಾಗಿ ‘CAPE’ ಎಂಬ ವಿಶೇಷ ಪೋರ್ಟಲ್ ಆರಂಭಿಸಲಾಗಿದೆ. ಅರ್ಜಿ ಸಲ್ಲಿಸಿದ 60 ರಿಂದ 90 ದಿನಗಳಲ್ಲಿ ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ಈ ಬೆಳವಣಿಗೆಯಿಂದಾಗಿ ಎಲೆಕ್ಟ್ರಾನಿಕ್ಸ್, ಬಟ್ಟೆ ಮತ್ತು ಗೃಹೋಪಯೋಗಿ ವಸ್ತುಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದೆ. ಫೆಡ್ಎಕ್ಸ್ ನಂತಹ ಕಂಪನಿಗಳು ಈಗಾಗಲೇ ಗ್ರಾಹಕರಿಗೆ ಹಣ ಮರಳಿಸುವ ಭರವಸೆ ನೀಡಿವೆ. ಈ ಕ್ರಮವು ಅಮೆರಿಕದ ಆರ್ಥಿಕತೆಗೆ ಹೊಸ ಚೈತನ್ಯ ನೀಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Must Read