ಹೊಸದಿಗಂತ ಡಿಜಿಟಲ್ ಡೆಸ್ಕ್:
2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ನಲ್ಲಿ 128 ವರ್ಷಗಳ ಬಳಿಕ ಕ್ರಿಕೆಟ್‌ಗೆ ಸ್ಥಾನ ದೊರೆತಿರುವುದು ಅಭಿಮಾನಿಗಳಲ್ಲಿ ಭಾರೀ ಸಂಭ್ರಮ ಮೂಡಿಸಿದೆ. ಆದರೆ ಟೀಂ ಇಂಡಿಯಾದ ಇತ್ತೀಚಿನ ಟಿ20 ಪ್ರದರ್ಶನ ನಿರಾಸೆ ಮೂಡಿಸಿದ್ದು, ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯುವ ದಾರಿಯಲ್ಲೇ ಈಗ ಹೊಸ ಸವಾಲು ಎದುರಾಗಿದೆ.
ರ್ಯಾಂಕಿಂಗ್ ಕುಸಿತದಿಂದ ಹೆಚ್ಚಿದ ಆತಂಕ
ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧದ ಸರಣಿ ಸೋಲುಗಳ ಪರಿಣಾಮ ಭಾರತದ ಐಸಿಸಿ ಟಿ20 ರೇಟಿಂಗ್ 275ರಿಂದ 269ಕ್ಕೆ ಇಳಿದಿದೆ. ಇದೇ ವೇಳೆ ಇಂಗ್ಲೆಂಡ್ 267 ಅಂಕಗಳಿಗೆ ಏರಿದ್ದು, ಅಂತರ ಕೇವಲ ಎರಡು ಅಂಕಗಳಿಗೆ ಸೀಮಿತವಾಗಿದೆ.
ಇದನ್ನೂ ಓದಿ:
ನಾಲ್ಕು ತಂಡಗಳಿಗೆ ಮಾತ್ರ ನೇರ ಅವಕಾಶ
ಒಲಿಂಪಿಕ್ಸ್ ಕ್ರಿಕೆಟ್ ಟೂರ್ನಿಯಲ್ಲಿ ಆರು ತಂಡಗಳು ಮಾತ್ರ ಆಡಲಿವೆ. ಏಷ್ಯಾ, ಯುರೋಪ್, ಆಫ್ರಿಕಾ ಹಾಗೂ ಓಷಿಯಾನಿಯಾದಿಂದ ತಲಾ ಅಗ್ರ ರ್ಯಾಂಕಿಂಗ್ ತಂಡಕ್ಕೆ ನೇರ ಪ್ರವೇಶ ಸಿಗಲಿದ್ದು, ಅಂತಿಮ ಆಯ್ಕೆ 2026ರ ಡಿಸೆಂಬರ್ 31ರ ಐಸಿಸಿ ಶ್ರೇಯಾಂಕದ ಆಧಾರದಲ್ಲಿ ನಡೆಯಲಿದೆ.
ಪಾಕಿಸ್ತಾನಕ್ಕೂ ಸಿಗಬಹುದು ಲಾಭ
ಭಾರತ ಇದೇ ರೀತಿ ಸೋಲಿನ ಹಾದಿಯಲ್ಲಿ ಮುಂದುವರಿದರೆ ಏಷ್ಯಾದ ಅಗ್ರ ಸ್ಥಾನಕ್ಕೆ ಪೈಪೋಟಿ ಹೆಚ್ಚಲಿದೆ. ಇದು ಎರಡನೇ ಸ್ಥಾನದಲ್ಲಿರುವ ಪಾಕಿಸ್ತಾನಕ್ಕೆ ಮುನ್ನಡೆಯ ಅವಕಾಶ ಕಲ್ಪಿಸುವ ಸಾಧ್ಯತೆ ಇದೆ.
ಮುಂದಿನ ಪಂದ್ಯಗಳು ನಿರ್ಣಾಯಕ
ಒಲಿಂಪಿಕ್ಸ್‌ಗೆ ನೇರ ಅರ್ಹತೆ ಪಡೆಯಬೇಕಾದರೆ ಭಾರತ ತನ್ನ ಮುಂದಿನ ಟಿ20 ಪಂದ್ಯಗಳಲ್ಲಿ ಗೆಲುವಿನ ಹಾದಿಗೆ ಮರಳಲೇಬೇಕು. ಇಲ್ಲದಿದ್ದರೆ ರ್ಯಾಂಕಿಂಗ್‌ನಲ್ಲಿ ಮತ್ತಷ್ಟು ಕುಸಿತವಾಗಿ ಅರ್ಹತಾ ಲೆಕ್ಕಾಚಾರ ಬದಲಾಗುವ ಸಾಧ್ಯತೆ ಇದೆ.



