September 29, 2026
Tuesday, September 29, 2026
spot_img

ಮುಂಬೈನ ತಾಜ್‌ಗೆ ಬಾಂಬ್ ಇಟ್ಟಿದ್ದಾರಾ? ಬೆದರಿಕೆ ಕರೆ ಬೆನ್ನಲ್ಲೇ ತೀವ್ರ ಶೋಧ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನ ಐತಿಹಾಸಿಕ ತಾಜ್ ಮಹಲ್ ಪ್ಯಾಲೇಸ್ ಹೋಟೆಲ್‌ಗೆ ಬಂದ ಬಾಂಬ್ ಬೆದರಿಕೆ ಕರೆ ಕೆಲಕಾಲ ಭಾರೀ ಆತಂಕಕ್ಕೆ ಕಾರಣವಾಯಿತು. ಆದರೆ ಪೊಲೀಸರು ನಡೆಸಿದ ಸುದೀರ್ಘ ತಪಾಸಣೆಯ ಬಳಿಕ ಅದು ಹುಸಿ ಕರೆ ಎಂಬುದು ದೃಢಪಟ್ಟಿದ್ದು, ಹೋಟೆಲ್‌ನಲ್ಲಿ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿಲ್ಲ.

ತಾಜ್‌ನಲ್ಲಿ ಹೈ ಅಲರ್ಟ್

ಅಪರಿಚಿತ ವ್ಯಕ್ತಿಯಿಂದ ಬಾಂಬ್ ಬೆದರಿಕೆ ಮಾಹಿತಿ ಬಂದ ತಕ್ಷಣವೇ ಪೊಲೀಸರು, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನದಳ ಸ್ಥಳಕ್ಕೆ ಧಾವಿಸಿ ಹೋಟೆಲ್‌ನ ಲಾಬಿ, ಕೊಠಡಿಗಳು, ಪಾರ್ಕಿಂಗ್ ಸೇರಿದಂತೆ ಎಲ್ಲ ಪ್ರಮುಖ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯ ನಡೆಸಿದರು.

ಯಾವುದೇ ಸ್ಫೋಟಕ ಪತ್ತೆಯಾಗಿಲ್ಲ

ಗಂಟೆಗಳ ಕಾಲ ನಡೆದ ಪರಿಶೀಲನೆಯ ಬಳಿಕ ಹೋಟೆಲ್ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಪೊಲೀಸರು ಸ್ಪಷ್ಟಪಡಿಸಿದರು. ಬೆದರಿಕೆ ಕರೆ ಸುಳ್ಳು ಮಾಹಿತಿ ಎಂದು ಘೋಷಿಸಲಾಗಿದ್ದು, ಆತಂಕಗೊಂಡಿದ್ದ ಅತಿಥಿಗಳು ನಿಟ್ಟುಸಿರು ಬಿಟ್ಟರು.

ಇದನ್ನೂ ಓದಿ:

ಆರೋಪಿಗಾಗಿ ಶೋಧ

ತಾಂತ್ರಿಕ ತನಿಖೆಯಲ್ಲಿ ಕರೆ ನವಿ ಮುಂಬೈನ ತುರ್ಭೆ ಪ್ರದೇಶದಿಂದ ಬಂದಿರುವುದು ಗೊತ್ತಾಗಿದೆ. ಕರೆ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಲು ಪೊಲೀಸರು ವಿಶೇಷ ತನಿಖೆ ಆರಂಭಿಸಿದ್ದು, ಮೊಬೈಲ್ ಸಂಖ್ಯೆ ಆಧರಿಸಿ ಶೋಧ ಕಾರ್ಯ ಮುಂದುವರಿದಿದೆ.

ಸರಣಿ ಹುಸಿ ಕರೆಗಳಿಂದ ಆತಂಕ

ಇತ್ತೀಚೆಗೆ ದೆಹಲಿಯ ಕೆಂಪುಕೋಟೆಗೂ ಇದೇ ರೀತಿಯ ಹುಸಿ ಬಾಂಬ್ ಬೆದರಿಕೆ ಬಂದಿತ್ತು. ಇದೀಗ ತಾಜ್ ಹೋಟೆಲ್‌ಗೂ ಇಂತಹ ಕರೆ ಬಂದಿರುವುದರಿಂದ ಭದ್ರತಾ ಸಂಸ್ಥೆಗಳು ಹೆಚ್ಚಿನ ಎಚ್ಚರಿಕೆ ವಹಿಸಿದ್ದು, ಪ್ರಕರಣದ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿವೆ.

Must Read