July 28, 2026
Tuesday, July 28, 2026
spot_img

ದೆಹಲಿಯಲ್ಲಿ ‘ಬ್ರಿಡ್ಜ್ ಟು ಬೆಂಗಳೂರು’ ಕಾರ್ಯಕ್ರಮ, 80 ದೇಶಗಳ ಪ್ರತಿನಿಧಿಗಳು ಭಾಗಿ


ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಜಾಗತಿಕ ಮಾರುಕಟ್ಟೆ ಪ್ರವೇಶವನ್ನು ವಿಸ್ತರಿಸಲು ಸರ್ಕಾರವು ‘ಬ್ರಿಡ್ಜ್ ಟು ಬೆಂಗಳೂರು– ಡೈಲಾಗ್ ವಿತ್ ಡಿಪ್ಲೊಮ್ಯಾಟ್ಸ್’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಇದೇ ತಿಂಗಳ 17ರಂದು ದೆಹಲಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿದೇಶಗಳಿಂದ ಪ್ರತಿನಿಧಿಗಳು ಕೂಡ ಭಾಗವಹಿಸಲಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರೊಂದಿಗೆ ಕಿರಣ್ ಮಜುಂದಾರ್-ಶಾ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಈ ವೇದಿಕೆ GIA 2.0ಗೆ ಜಾಗತಿಕ ಪ್ರದರ್ಶನ ವೇದಿಕೆಯಾಗಿದ್ದು, ಸರ್ಕಾರಗಳು, ರಾಜತಾಂತ್ರಿಕರು, ಸ್ಟಾರ್ಟ್‌ಅಪ್‌ಗಳು, ಉದ್ಯಮ ನಾಯಕರೂ ಹಾಗೂ ಸಂಶೋಧನಾ ಸಂಸ್ಥೆಗಳನ್ನು ಒಟ್ಟುಗೂಡಿಸಿ ಉದಯೋನ್ಮುಖ ಕ್ಷೇತ್ರಗಳಲ್ಲಿ ಸಹಕಾರವನ್ನು ಗಾಢಗೊಳಿಸುವುದಕ್ಕೆ ಸಹಾಯಕವಾಗಲಿದೆ ಎಂದು ಐಟಿ ಬಿಟಿ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !