August 13, 2026
Thursday, August 13, 2026
spot_img

ಕೆಲಸ ಮುಗಿಯೋವರೆಗೂ ಹೊರಗೆ ಹೋಗುವಂತಿಲ್ಲ! ಬ್ಯಾಂಕ್‌ ಡೋರ್‌ ಲಾಕ್‌ ಮಾಡಿದ ಮ್ಯಾನೇಜರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೆಲಸ ಮುಗಿಯುವವರೆಗೂ ಮನೆಗೆ ಕಳಿಸೋದಿಲ್ಲ ಎಂದು ತಡರಾತ್ರಿವರೆಗೂ ಸಿಬ್ಬಂದಿಯನ್ನು ಬ್ಯಾಂಕ್‌ನಲ್ಲೇ ಲಾಕ್‌ಮಾಡಿದ ಘಟನೆ ಹಾಸನದ ಅರಕಲಗೂಡಿನ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ನಡೆದಿದೆ.

ಶಾಖಾ ವ್ಯವಸ್ಥಾಪಕರು ಸಿಬ್ಬಂದಿಯನ್ನು ತಡರಾತ್ರಿವರೆಗೂ ಕಚೇರಿಯಲ್ಲೇ ಇರಬೇಕು ಎಂದು ಒತ್ತಾಯಿಸಿ ಮೇನ್‌ ಗೇಟ್‌ನ್ನು ಲಾಕ್‌ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಶಾಖಾ ವ್ಯವಸ್ಥಾಪಕರು ಗ್ರಾಹಕ ಸೇವಾ ಸಹಾಯಕ (ಕ್ಲರ್ಕ್) ಅವರನ್ನು ಕಚೇರಿ ಸಮಯ ಮುಗಿದ ಬಳಿಕವೂ ಶಾಖೆಯಲ್ಲೇ ಉಳಿದು ಕೆಲಸ ಮಾಡುವಂತೆ ಸೂಚಿಸಿರುವುದು ಕಂಡುಬರುತ್ತದೆ. ಇದಕ್ಕೆ ಸಿಬ್ಬಂದಿ ಆಕ್ಷೇಪ ವ್ಯಕ್ತಪಡಿಸಿದಾಗ, ಶಾಖೆಯ ಮುಖ್ಯ ಗೇಟ್‌ಗೆ ಬೀಗ ಹಾಕಿ, ಬಾಕಿ ಕೆಲಸ ಮುಗಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಸಿಬ್ಬಂದಿ, ತನ್ನ ಪಾಲಿನ ಎಲ್ಲಾ ಕೆಲಸವನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿ ಮನೆಗೆ ತೆರಳಲು ಅನುಮತಿ ಕೋರಿದರೂ, ವ್ಯವಸ್ಥಾಪಕರು ಹೊರಗೆ ಹೋಗಲು ಅವಕಾಶ ನೀಡಿಲ್ಲ ಎಂದು ಆರೋಪಿಸಲಾಗಿದೆ. ಈ ವೇಳೆ ಸಿಬ್ಬಂದಿ ಶಾಂತವಾಗಿ ಸಂಪೂರ್ಣ ಘಟನೆಯನ್ನು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ದಾಖಲಿಸಿಕೊಂಡಿದ್ದು, ಅದೇ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !