July 3, 2026
Friday, July 3, 2026
spot_img

ಮಕ್ಕಳನ್ನು ವಾಶಿಂಗ್‌ ಮಶೀನ್‌ನಲ್ಲಿಟ್ಟು ಕ್ರೌರ್ಯ ಮೆರೆದಿದ್ದ ಕ್ಯಾಪ್‌ಜೆಮಿನಿ ಡೇ ಕೇರ್‌ ಬಂದ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಕ್ಕಳನ್ನು ವಾಶಿಂಗ್‌ ಮಶೀನ್‌ನಲ್ಲಿಟ್ಟು ಕ್ರೌರ್ಯ ಮೆರೆದಿದ್ದ ಕ್ಯಾಪ್‌ಜೆಮಿನಿ ಡೇ ಕೇರ್‌ ಸೆಂಟರ್‌ನನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಡೇಕೇರ್ ಸಿಬ್ಬಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಡೇ-ಕೇರ್ ಕೇಂದ್ರದಲ್ಲಿ ಪುಟ್ಟ ಮಕ್ಕಳಿಗೆ ಕಿರುಕುಳ ನೀಡುತ್ತಿರುವ ದೃಶ್ಯಗಳಿರುವ ವಿಡಿಯೊಗಳು ವೈರಲ್ ಆದ ಬಳಿಕ ಪ್ರಕರಣ ಬೆಳಕಿಗೆ ಬಂದಿತ್ತು. ಬಳಿಕ ವಿಷಯವನ್ನು ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಪೊಲೀಸರು ಕ್ರಮ ಕೈಗೊಂಡಿದ್ದಾರೆ.

ಬ್ರೂಕ್‌ಫೀಲ್ಡ್‌ನ ಎಚ್‌ಎಎಲ್ ಕ್ಯಾಂಪಸ್‌ನಲ್ಲಿರುವ ಕ್ಯಾಪ್‌ಜೆಮಿನಿ ಡೇ-ಕೇರ್ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದ ಐವರು ಮಹಿಳಾ ಸಿಬ್ಬಂದಿಯ ವಿರುದ್ಧ ಜುವೆನೈಲ್ ಜಸ್ಟಿಸ್ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆಯ ಸಂಬಂಧಿತ ವಿಧಿಗಳಡಿ ಎಫ್‌ಐಆರ್ ದಾಖಲಿಸಲಾಗಿದೆ. ತನಿಖೆ ಮುಂದುವರೆದಿದ್ದು, ಇನ್ನೂ ಯಾರನ್ನೂ ಬಂಂಧನಕ್ಕೊಳಪಡಿಸಿಲ್ ಎಂದು ಪೊಲೀಸರು ಹೇಳಿದ್ದಾರೆ.

ದೂರುದಾರರು ನೀಡಿರುವ ಮಾಹಿತಿಯಂತೆ, ಡೇ-ಕೇರ್ ಕೇಂದ್ರದೊಳಗೆ ಚಿತ್ರೀಕರಿಸಲಾಗಿದೆ ಎನ್ನಲಾದ ವಿಡಿಯೊಗಳಲ್ಲಿ ಎರಡುರಿಂದ ಮೂರು ವರ್ಷದ ಮಕ್ಕಳ ಮೇಲೆ ಸಿಬ್ಬಂದಿ ದೈಹಿಕ ಕಿರುಕುಳ ನೀಡುತ್ತಿರುವ ದೃಶ್ಯಗಳು ಕಂಡುಬಂದಿವೆ. ಬಾತ್‌ರೂಮ್‌ನಲ್ಲಿ ಕೂಡಿ ಹಾಕುವುದು, ವಾಶಿಂಗ್‌ ಮಶೀನ್‌ ಒಳಗೆ ಕೂರಿಸುವುದು, ಟಾಯ್ಲೆಟ್‌ ಸೀಟಿನಡಿ ಕೂರಿಸಿ ತೊಂದರೆ ನೀಡಿದ್ದಾರೆ ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !