October 10, 2026
Saturday, October 10, 2026
spot_img

CINE | ವೈಬ್‌ ಮ್ಯಾಚ್‌ ಆಗ್ಲಿ ಅಂತ ಕಾಯ್ತಾ ಇದೀನಿ, ಮುಂದಿನ ವರ್ಷ ಮತ್ತೆ ಮದುವೆ ಆಗ್ತೀನಿ ಎಂದ ಚಂದನ್‌ ಶೆಟ್ಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಿಂಗರ್‌ ಚಂದನ್‌ ಶೆಟ್ಟಿ ಮತ್ತೊಮ್ಮೆ ಮದುವೆಯಾಗೋಕೆ ನಿರ್ಧಾರ ಮಾಡಿದ್ದಾರೆ. ಮುಂದಿನ ವರ್ಷದಲ್ಲಿ ಮದುವೆ ಸುದ್ದಿಯನ್ನು ಹಂಚಿಕೊಳ್ತೀನಿ ಎಂದು ಚಂದನ್‌ ಹೇಳಿಕೊಂಡಿದ್ದಾರೆ.

ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಬಿಗ್‌ಬಾಸ್‌ನಲ್ಲಿ ಭೇಟಿಯಾಗಿ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಕೆಲವೇ ವರ್ಷದಲ್ಲಿ ಹೊಂದಾಣಿಕೆಯಾಗದೇ ಡಿವೋರ್ಸ್‌ ತೆಗೆದುಕೊಂಡಿದ್ದಾರೆ. ಮೂವ್‌ ಆನ್‌ ಆಗುವ ಸೂಚನೆಯನ್ನು ಚಂದನ್‌ ನೀಡಿದ್ದು, ಮುಂದಿನ ವರ್ಷದಿಂದ ಮನೆಯಲ್ಲಿ ಹುಡುಗಿ ನೋಡೋಕೆ ಹೇಳಿದ್ದೀನಿ ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ಚಂದನ್‌ ಎರಡನೇ ಮದುವೆ ಆಗ್ತಾರಾ ಎನ್ನುವ ಪ್ರಶ್ನೆ ಎದುರಾಗಿದೆ. ಅದಕ್ಕೆ ಚಂದನ್‌ ಬೋಲ್ಡ್‌ ಆಗಿಯೇ ಉತ್ತರ ನೀಡಿದ್ದಾರೆ. ಖಂಡಿತಾ ಆಗ್ತೀನಿ, ಆದರೆ ಸರಿಯಾದ ವೈಬ್‌ ಮ್ಯಾಚ್‌ ಆಗುವ ಹುಡುಗಿ ಸಿಗಲಿ ಅಂತ ಕಾಯ್ತಿದ್ದೇನೆ. ಜೀವನ ಅಂದಮೇಲೆ ಎಲ್ಲರಿಗೂ ಕಂಪಾನಿಯನ್‌ಶಿಪ್‌ ಬೇಕಾಗತ್ತೆ ಎಂದಿದ್ದಾರೆ.

ಸಿಗದಿರುವ ಹುಡುಗಿ ಬಗ್ಗೆ, ಆಗದಿರುವ ಮದುವೆ ಬಗ್ಗೆ ಈಗ್ಲೇ ಏನೂ ಅಂತ ಹೇಳೋದು. ನೆಕ್ಸ್ಟ್‌ ಡೀಟೇಲ್ಸ್‌ ಮುಂದಿನ ವರ್ಷ ಕೊಡ್ತೇನೆ ಎಂದಿದ್ದಾರೆ.

Must Read