June 24, 2026
Wednesday, June 24, 2026
spot_img

ಅಯ್ಯೋ…! ಫೋಟೋ ಶೂಟ್ ಮಾಡ್ಸೋಕೆ ಬಂದು ಹೀಗಾಯ್ತಲ್ಲ: ನೀರಿಗೆ ಬಿದ್ದು 3 ವರ್ಷದ ಕಂದಮ್ಮ ಸಾ*ವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗರ್ಭಿಣಿ ತಾಯಿ ಫೋಟೊ ಶೂಟ್ ಮಾಡಲು ಬಂದಿದ್ದ ವೇಳೆ ಆಕೆಯ ಮಗು ಆಟವಾಡುತ್ತಾ ಪೂಲ್​​ಗೆ ಬಿದ್ದು ಮೃತಪಟ್ಟ ಘಟನೆ ನೆಲಮಂಗಲ ತಾಲೂಕಿನ ಗಿಡ್ಡೆನಹಳ್ಳಿಯಲ್ಲಿ ನಡೆದಿದೆ.

ಮೃತ ಬಾಲಕ ಲಕ್ಷ್ಮೀರ್ ಎಂದು ಗುರುತಿಸಲಾಗಿದೆ. ತಾಯಿ ಗರ್ಭಿಣಿಯಾಗಿದ್ದರಿಂದ ಫೋಟೊ ಶೂಟ್ ಮಾಡಲು ಬಂದಿದ್ದ ವೇಳೆ ಮಗು ಅಲ್ಲಿ ಆಟವಾಡುತ್ತಿತ್ತು. ಈ ಸಮಯದಲ್ಲಿ ಅಜಾಗರೂಕತೆಯಿಂದ ಹತ್ತಿರದಲ್ಲಿದ್ದ ನೀರಿನ ಪೂಲ್ ಗೆ ಬಿದ್ದಿದ್ದು, ಕೆಲವೇ ಕ್ಷಣಗಳಲ್ಲಿ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಇದನ್ನೂ ಓದಿ:

ಮಗು ಜೆ.ಪಿ. ನಗರ ನಿವಾಸಿಗಳಾದ ಸ್ವಾತಿ ಮತ್ತು ಚರಣ್ ರಾಜ್ ದಂಪತಿಯ ಪುತ್ರ. ಒಂದು ವಾರದ ಹಿಂದೆ ಕೆಲಸದ ನಿಮಿತ್ತ ಚರಣ್ ರಾಜ್ ವಿದೇಶಕ್ಕೆ ತೆರಳಿದ್ದರು. ಪೋಟೊ ಶೂಟ್ ಮಾಡುವುದಾಗಿ ತಿಳಿಸಿ ಸ್ವಾತಿ ಸ್ನೇಹಿತೆಯೊಂದಿಗೆ ಇಲ್ಲಿ ಬಂದಿದ್ದರು ಎನ್ನಲಾಗಿದೆ. ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ತಂದೆ ವಿದೇಶದಿಂದ ಮರಳಿದ ಬಳಿಕ ಮುಂದಿನ ವಿಧಿವಿಧಾನಗಳು ನಡೆಯಲಿವೆ ಎಂದು ತಿಳಿದುಬಂದಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !