ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ನಟ ಅಜಿತ್ ಕುಮಾರ್ ತಮ್ಮ 55ನೇ ಹುಟ್ಟುಹಬ್ಬದ ಸಂಭ್ರಮವನ್ನು ಅಭಿಮಾನಿಗಳೊಂದಿಗೆ ವಿಶೇಷವಾಗಿ ಹಂಚಿಕೊಂಡಿದ್ದಾರೆ. ತಮ್ಮ ಬಹುನಿರೀಕ್ಷಿತ ರೇಸಿಂಗ್ ಡಾಕ್ಯುಮೆಂಟರಿ ‘ಗ್ಲಾಡಿಯೇಟರ್ಸ್’ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದ್ದಾರೆ.
ಅಜಿತ್ ಅವರ ಮೋಟಾರ್‌ಸ್ಪೋರ್ಟ್ಸ್ ಪಯಣವನ್ನು ತೆರೆದಿಡುವ ಈ ಡಾಕ್ಯುಮೆಂಟರಿ, ಅವರ ನಟನ ಬದುಕಿನ ಮತ್ತೊಂದು ವಿಭಿನ್ನ ಮುಖವನ್ನು ಅನಾವರಣಗೊಳಿಸಲಿದೆ. ಎ.ಎಲ್. ವಿಜಯ್ ನಿರ್ದೇಶನದ ಈ ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಸಂಗೀತ ನೀಡಿದ್ದು, ಚಿತ್ರಮಂದಿರದಲ್ಲೇ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.
ಇದನ್ನೂ ಓದಿ:
ಬಿಡುಗಡೆಯಾದ ಗ್ಲಿಂಪ್ಸ್‌ನಲ್ಲಿ ರೇಸ್ ಟ್ರ್ಯಾಕ್, ವೇಗದ ಕಾರುಗಳು ಮತ್ತು ರೇಸಿಂಗ್ ಗೇರ್‌ನಲ್ಲಿ ಕಾಣಿಸಿಕೊಂಡ ಅಜಿತ್ ಗಮನ ಸೆಳೆದಿದ್ದಾರೆ. ಕೊನೆಯಲ್ಲಿ ಮೂಡುವ ‘ಗ್ಲಾಡಿಯೇಟರ್ಸ್ – ಇನ್ ಪರ್ಸ್ಯೂಟ್ ಆಫ್ ಚಾಲೆಂಜಸ್’ ಎಂಬ ಟ್ಯಾಗ್‌ಲೈನ್ ಚಿತ್ರದ ಥೀಮ್‌ಗೆ ಇನ್ನಷ್ಟು ಬಲ ನೀಡಿದೆ.
ಇತ್ತೀಚಿನ ವರ್ಷಗಳಲ್ಲಿ ಮೋಟಾರ್‌ಸ್ಪೋರ್ಟ್ಸ್ ಕ್ಷೇತ್ರದಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ಅಜಿತ್, ಇದೀಗ ತಮ್ಮ ಆ ಪಯಣವನ್ನೇ ಡಾಕ್ಯುಮೆಂಟರಿ ರೂಪದಲ್ಲಿ ಪ್ರೇಕ್ಷಕರ ಮುಂದೆ ತರುತ್ತಿರುವುದು ಅಭಿಮಾನಿಗಳಲ್ಲಿ ಹೊಸ ನಿರೀಕ್ಷೆ ಹುಟ್ಟಿಸಿದೆ.



