October 10, 2026
Saturday, October 10, 2026
spot_img

33 ವರ್ಷದ ಹಾರಾಟಕ್ಕೆ ವಿರಾಮ: Spirit Airlines ಸೇವೆ ಸ್ಥಗಿತ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ವಿಮಾನಯಾನ ಕ್ಷೇತ್ರದಲ್ಲಿ ಮಹತ್ವದ ಹೆಸರು ಮಾಡಿದ್ದ Spirit Airlines ತನ್ನ ದೀರ್ಘಕಾಲದ ಸೇವೆಗೆ ಶಾಶ್ವತವಾಗಿ ಬ್ರೇಕ್ ಹಾಕಿದೆ.

ಸುಮಾರು 33 ವರ್ಷಗಳ ಕಾಲ ಕಡಿಮೆ ದರದ ವಿಮಾನ ಸೇವೆ ನೀಡಿದ್ದ ಸಂಸ್ಥೆ, ತಕ್ಷಣದಿಂದಲೇ ತನ್ನ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಿರುವುದಾಗಿ ಘೋಷಿಸಿದೆ.

ಇದನ್ನೂ ಓದಿ:

ಈ ನಿರ್ಧಾರದಿಂದ ಈಗಾಗಲೇ ನಿಗದಿಯಾಗಿದ್ದ ಎಲ್ಲಾ ವಿಮಾನ ಸಂಚಾರ ರದ್ದಾಗಿದ್ದು, ಟಿಕೆಟ್ ಬುಕ್ ಮಾಡಿಕೊಂಡ ಪ್ರಯಾಣಿಕರಿಗೆ ಹಣವನ್ನು ಮೂಲ ಪಾವತಿ ವಿಧಾನದಲ್ಲೇ ಹಿಂತಿರುಗಿಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಕಡಿಮೆ ದರದ ಪ್ರಯಾಣಕ್ಕೆ ಹೆಸರಾಗಿದ್ದ ಈ ಸಂಸ್ಥೆ, ಸಾವಿರಾರು ಉದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಿತ್ತು.

ಆರ್ಥಿಕ ಸಂಕಷ್ಟ, ಸಾಲದ ಒತ್ತಡ ಹಾಗೂ ವ್ಯವಹಾರ ನಿರ್ವಹಣೆಯ ಸವಾಲುಗಳಿಂದ ಸಂಸ್ಥೆ ತೀವ್ರ ಒತ್ತಡಕ್ಕೆ ಸಿಲುಕಿತ್ತು ಎನ್ನಲಾಗಿದೆ. ಸಂಸ್ಥೆಯನ್ನು ಪುನಶ್ಚೇತನಗೊಳಿಸಲು ಯುನೈಟೆಡ್ ಸ್ಟೇಟ್ಸ್ ಸರ್ಕಾರದ ಮಟ್ಟದಲ್ಲೂ ಚರ್ಚೆಗಳು ನಡೆದಿದ್ದರೂ, ಪರಿಸ್ಥಿತಿ ಸುಧಾರಿಸದ ಹಿನ್ನೆಲೆ ಈ ಕಠಿಣ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

Must Read