September 7, 2026
Monday, September 7, 2026
spot_img

CINE | ಶ್ರೀ ವಿಷ್ಣುಗೆ ಜೋಡಿಯಾದ ಆಶಿಕಾ ರಂಗನಾಥ್: ತೆಲುಗು ಸಿನಿಮಾದಲ್ಲಿ ಮತ್ತೊಂದು ಬಿಗ್ ಎಂಟ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಭಿನ್ನ ಕಥೆಗಳು ಹಾಗೂ ಹೊಸ ರೀತಿಯ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಗಮನ ಸೆಳೆಯುತ್ತಿರುವ ತೆಲುಗು ನಟ ಶ್ರೀ ವಿಷ್ಣು, ಸದ್ಯ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರ ಮುಂಬರುವ ಹೊಸ ಸಿನಿಮಾಗೆ ಸಂಬಂಧಿಸಿದ ಕುತೂಹಲಕಾರಿ ಅಪ್‌ಡೇಟ್ ಹೊರಬಿದ್ದಿದೆ.

ಶ್ರೀ ವಿಷ್ಣುಗೆ ನಾಯಕಿ

ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ನಲ್ಲಿ ಮೂಡಿಬರುತ್ತಿರುವ ಈ ಹೊಸ ಸಿನಿಮಾವನ್ನು ‘ಅನಗನಗ’ ಚಿತ್ರದ ಮೂಲಕ ನಿರ್ದೇಶಕರಾಗಿ ಪರಿಚಯವಾದ ಸನ್ನಿ ಸಂಜಯ್ ನಿರ್ದೇಶಿಸುತ್ತಿದ್ದಾರೆ. ಈಚಿತ್ರಕ್ಕೆ ಶ್ರೀ ವಿಷ್ಣುಗೆ ನಾಯಕಿಯಾಗಿ ಆಶಿಕಾ ರಂಗನಾಥ್‌ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:

ಚಿತ್ರದ ಗ್ಲಿಂಪ್ಸ್‌ ಕೂಡ ಬಿಡುಗಡೆ

ಈ ಹೊಸ ಸಿನಿಮಾದ ಶೂಟಿಂಗ್ ಈಗಾಗಲೇ ಶುರುವಾಗಿದ್ದು, ಚಿತ್ರತಂಡ ಚಿತ್ರದ ಗ್ಲಿಂಪ್ಸ್‌ವೊಂದನ್ನೂ ಕೂಡ ಬಿಡುಗಡೆ ಮಾಡಿದೆ. ತೆಲುಗು ಪ್ರೇಕ್ಷಕರಿಗೂ ಪರಿಚಿತರಾಗಿರುವ ಆಶಿಕಾ, ಈಗಾಗಲೇ ಹಲವು ದಕ್ಷಿಣ ಭಾರತೀಯ ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲು ಅವರು ಸಜ್ಜಾಗಿದ್ದಾರೆ.

ನಾಗ ವಂಶಿ ಈ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದು, ಹರಿಕಾ ಸೂರ್ಯದೇವರ ನಿರ್ಮಾಣದಲ್ಲಿ ಸಿತಾರಾ ಎಂಟರ್‌ಟೈನ್‌ಮೆಂಟ್ಸ್ ಬ್ಯಾನರ್‌ ಅಡಿಯಲ್ಲಿ ಚಿತ್ರ ಮೂಡಿಬರುತ್ತಿದೆ. ಸದ್ಯ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಮುಂದಿನ ದಿನಗಳಲ್ಲಿ ಚಿತ್ರದ ಕುರಿತು ಮತ್ತಷ್ಟು ಅಪ್ಡೇಟ್ ಗಳು ಹೊರಬರುವ ಸಾಧ್ಯತೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !