May 15, 2026
Friday, May 15, 2026
spot_img

CINE | ‘ಧುರಂಧರ್’ ಸಕ್ಸಸ್ ಸಂಭ್ರಮ: ರಾಕೇಶ್ ಬೇಡಿಗೆ ಸಿಕ್ತು 1 ಕೋಟಿ ರೂ. ಬೋನಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನಲ್ಲಿ ಸದ್ಯ ಭಾರೀ ಚರ್ಚೆಯಲ್ಲಿರುವ ‘ಧುರಂಧರ್’ ಸರಣಿ ಸಿನಿಮಾಗಳು ಕಲೆಕ್ಷನ್ ಮಾತ್ರವಲ್ಲ, ನಟರಿಗೂ ದೊಡ್ಡ ಮಟ್ಟದ ಲಾಭ ತಂದುಕೊಟ್ಟಿವೆ. ವಿಶೇಷವಾಗಿ ಹಿರಿಯ ನಟ ರಾಕೇಶ್ ಬೇಡಿ ಅವರಿಗೆ ಸಿಕ್ಕ ಗೌರವ ಎಲ್ಲರ ಗಮನ ಸೆಳೆದಿದೆ.

ಧುರಂಧರ್ ಮತ್ತು ಅದರ ಮುಂದುವರಿದ ಭಾಗ ಧುರಂಧರ್: ದಿ ರಿವೆಂಜ್ ಯಶಸ್ಸಿನ ಬಳಿಕ, ನಿರ್ಮಾಪಕರು ರಾಕೇಶ್ ಬೇಡಿಗೆ ಹೆಚ್ಚುವರಿ 1 ಕೋಟಿ ರೂಪಾಯಿ ಬೋನಸ್ ನೀಡಿದ್ದಾರೆ. ಈ ಎರಡು ಸಿನಿಮಾಗಳಿಗಾಗಿ ಅವರಿಗೆ ಸುಮಾರು 50 ಲಕ್ಷ ರೂಪಾಯಿ ಸಂಭಾವನೆ ನಿಗದಿಯಾಗಿತ್ತು. ಆದರೆ ಚಿತ್ರದ ಭರ್ಜರಿ ಪ್ರತಿಕ್ರಿಯೆ ಹಿನ್ನೆಲೆ, ನಿರ್ದೇಶಕ ಆದಿತ್ಯ ಧರ್ ಮತ್ತು ನಿರ್ಮಾಪಕ ಲೋಕೇಶ್ ಧರ್ ಈ ನಿರ್ಧಾರ ಕೈಗೊಂಡಿದ್ದಾರೆ.

ಇದನ್ನೂ ಓದಿ:

ಸ್ಪೈ ಥ್ರಿಲ್ಲರ್ ಶೈಲಿಯ ಈ ಸಿನಿಮಾದಲ್ಲಿ ರಣವೀರ್ ಸಿಂಗ್ ನಾಯಕನಾಗಿ ನಟಿಸಿದ್ದು, ರಾಕೇಶ್ ಬೇಡಿ ಅವರು ‘ಜಮೀಲ್ ಜಮಾಲಿ’ ಎಂಬ ಪಾಕಿಸ್ತಾನಿ ರಾಜಕಾರಣಿಯ ಪಾತ್ರದಲ್ಲಿ ಮಿಂಚಿದ್ದಾರೆ.

ಈ ಸಿನಿಮಾದಲ್ಲಿ ಅಕ್ಷಯ್ ಖನ್ನಾ, ಸಂಜಯ್ ದತ್, ಆರ್ ಮಾಧವನ್ ಹಾಗೂ ಅರ್ಜುನ್ ರಾಮ್‌ಪಾಲ್ ಸೇರಿದಂತೆ ಹಲವು ತಾರಾಗಣವಿದೆ. ಎರಡೂ ಸಿನಿಮಾಗಳು ಸೇರಿ ವಿಶ್ವಾದ್ಯಂತ ಸುಮಾರು 3000 ಕೋಟಿ ರೂಪಾಯಿ ಗಳಿಕೆ ಮಾಡಿ ದಾಖಲೆ ನಿರ್ಮಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !