August 12, 2026
Wednesday, August 12, 2026
spot_img

CINE | ಗ್ಲಾಮರ್ ಜೊತೆಗೆ ಹಾರರ್ ಡೋಸ್: ‘ರಾಗಿಣಿ 3’ ಮೂಲಕ ಮಿಲ್ಕಿ ಬ್ಯೂಟಿ ಹೊಸ ಸರ್ಪ್ರೈಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಜನಪ್ರಿಯ ಹಾರರ್ ಫ್ರಾಂಚೈಸ್‌ಗಳಲ್ಲಿ ಒಂದಾದ ‘ರಾಗಿಣಿ’ ಸರಣಿಯ ಮೂರನೇ ಭಾಗಕ್ಕೆ ಅಧಿಕೃತ ಚಾಲನೆ ಸಿಕ್ಕಿದೆ. ಈ ಬಾರಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಚಿತ್ರದ ಚಿತ್ರೀಕರಣ ಲಂಡನ್‌ನಲ್ಲಿ ಆರಂಭವಾಗಿದೆ.

ಲಂಡನ್‌ನಲ್ಲಿ ಶುರುವಾಯ್ತು ಶೂಟಿಂಗ್

ಚಿತ್ರೀಕರಣ ಆರಂಭವಾದ ವಿಚಾರವನ್ನು ತಮನ್ನಾ ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದಾರೆ. ನಿರ್ದೇಶಕ ಶಶಾಂಕ್ ಘೋಷ್ ಆ್ಯಕ್ಷನ್-ಕಟ್ ಹೇಳುತ್ತಿರುವ ಈ ಚಿತ್ರವನ್ನು ಏಕ್ತಾ ಕಪೂರ್ ನಿರ್ಮಿಸುತ್ತಿದ್ದಾರೆ. ಆರಂಭದಲ್ಲಿ ಮತ್ತೊಬ್ಬ ನಟಿಯನ್ನು ಪರಿಗಣಿಸಲಾಗಿದ್ದರೂ, ಕೊನೆಗೆ ಈ ಅವಕಾಶ ತಮನ್ನಾ ಪಾಲಾಗಿದೆ ಎನ್ನಲಾಗಿದೆ.

ಇದನ್ನೂ ಓದಿ:

2027ರಲ್ಲಿ ತೆರೆಗೆ ‘ರಾಗಿಣಿ 3’

ಹಾರರ್, ರೊಮ್ಯಾನ್ಸ್ ಮತ್ತು ಸಸ್ಪೆನ್ಸ್ ಮಿಶ್ರಣದ ಕಥೆಯೊಂದಿಗೆ ಸಿನಿಮಾ ಮೂಡಿಬರುತ್ತಿದೆ. ಮೊದಲ ಹಂತದ ಚಿತ್ರೀಕರಣ ಲಂಡನ್‌ನಲ್ಲಿ ನಡೆಯಲಿದ್ದು, ಬಳಿಕ ಇತರೆ ಸ್ಥಳಗಳಲ್ಲೂ ಶೂಟಿಂಗ್ ಮುಂದುವರಿಯಲಿದೆ. ಎಲ್ಲವೂ ಯೋಜನೆಯಂತೆ ನಡೆದರೆ, 2027ರಲ್ಲಿ ‘ರಾಗಿಣಿ 3’ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !