June 14, 2026
Sunday, June 14, 2026
spot_img

CINE | ‘ಕರುಪ್ಪು’ ಟ್ರೈಲರ್ ಔಟ್: ಕೋರ್ಟ್ ರೂಮ್‌ನಲ್ಲಿ ಹೇಗಿದೆ ಸೂರ್ಯ-ತ್ರಿಷಾ ಮಾಸ್ ಜುಗಲ್‌ಬಂದಿ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ಸಿನಿರಂಗದಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿರುವ ‘ಕರುಪ್ಪು’ ಸಿನಿಮಾ ಇದೀಗ ಟ್ರೈಲರ್ ಮೂಲಕ ಅಭಿಮಾನಿಗಳ ಗಮನ ಸೆಳೆದಿದೆ.

ಸೂರ್ಯ ಮತ್ತು ತ್ರಿಷಾ ಕೃಷ್ಣನ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಆ್ಯಕ್ಷನ್-ಡ್ರಾಮಾ ಚಿತ್ರದಲ್ಲಿ ಇಬ್ಬರೂ ವಕೀಲರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಇದು ಸಾಮಾನ್ಯ ಕೋರ್ಟ್ ಕಥೆಯಲ್ಲ, ಸ್ಟೈಲಿಷ್ ಆ್ಯಕ್ಷನ್ ಮತ್ತು ಭರ್ಜರಿ ಡೈಲಾಗ್‌ಗಳಿಂದ ಕೂಡಿದ ಪವರ್‌ಫುಲ್ ಕಥೆ ಎಂಬುದು ಟ್ರೈಲರ್‌ನಲ್ಲೇ ಸ್ಪಷ್ಟವಾಗಿದೆ.

ಇದನ್ನೂ ಓದಿ:

ಸೂರ್ಯ ಈ ಸಿನಿಮಾದಲ್ಲಿ ವಿಭಿನ್ನ ಶೈಲಿಯ ವಕೀಲನಾಗಿ ಮಿಂಚಿದ್ದು, ನ್ಯಾಯಕ್ಕಾಗಿ ಹೋರಾಡುವ ದೃಶ್ಯಗಳು ಟ್ರೈಲರ್‌ಗೆ ಹೆಚ್ಚುವರಿ ತೂಕ ನೀಡಿವೆ. ಕೋರ್ಟ್ ಒಳಗಿನ ಅವರ ಎಂಟ್ರಿ ಹಾಗೂ ಆ್ಯಕ್ಷನ್ ಸನ್ನಿವೇಶಗಳು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿವೆ. ತ್ರಿಷಾ ಕೃಷ್ಣನ್ ಕೂಡ ಸ್ಲಿಮ್ ಲುಕ್‌ನಲ್ಲಿ ಗಮನ ಸೆಳೆದಿದ್ದು, ಅವರ ನೋಸ್ ರಿಂಗ್ ಸ್ಟೈಲ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಆರ್.ಜೆ. ಬಾಲಾಜಿ ನಿರ್ದೇಶಿಸಿರುವ ಈ ಚಿತ್ರ ಮೇ 14 ರಂದು ಬಿಡುಗಡೆಯಾಗಲಿದೆ. ಸಾಯಿ ಅಭಯಂಕರ್ ಸಂಗೀತ ನೀಡಿರುವ ಸಿನಿಮಾದಲ್ಲಿ ಇಂದ್ರನ್ಸ್, ನಟ್ಟಿ, ಸ್ವಾಸಿಕಾ ಹಾಗೂ ಅನಘ ಮಾಯಾ ರವಿ ಸೇರಿದಂತೆ ಹಲವರು ನಟಿಸಿದ್ದಾರೆ. ಕರ್ನಾಟಕದಲ್ಲಿ ಈ ಚಿತ್ರವನ್ನು ಕೆವಿಎನ್ ಸಂಸ್ಥೆ ವಿತರಣೆ ಮಾಡುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !