ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪೆದ್ದಿ ಬಿಡುಗಡೆಗೂ ಮುನ್ನವೇ ದೊಡ್ಡ ಸುದ್ದಿಯಾಗಿದೆ.
ಜೂನ್ 4ರಂದು ವಿಶ್ವದಾದ್ಯಂತ ತೆರೆಕಾಣಲಿರುವ ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ 16+ ಪ್ರಮಾಣಪತ್ರ ನೀಡಿದ್ದು, ಜೊತೆಗೆ ಹಲವು ದೃಶ್ಯಗಳು ಮತ್ತು ಪದಗಳಿಗೆ ತಿದ್ದುಪಡಿ ಸೂಚಿಸಿದೆ.
ಡೈಲಾಗ್‌ಗಳಿಗೆ ಸೆನ್ಸಾರ್ ಸೂಚನೆ
ಚಿತ್ರದಲ್ಲಿರುವ ಕೆಲವು ಪದಗಳು ಹಾಗೂ ಸಮುದಾಯ ಸಂಬಂಧಿತ ಉಲ್ಲೇಖಗಳನ್ನು ತೆಗೆದುಹಾಕುವಂತೆ ಸಿಬಿಎಫ್‌ಸಿ ನಿರ್ದೇಶಿಸಿದೆ. ವಿಶೇಷವಾಗಿ ‘ಚಿಕಿರಿ ಚಿಕಿರಿ’ ಹಾಡಿನ ಕೆಲವು ಸಾಲುಗಳನ್ನು ಬದಲಾಯಿಸಲಾಗಿದೆ. ದ್ವಿತೀಯಾರ್ಧದಲ್ಲಿ ಕೇಳಿಬರುವ ‘ರಾಜಸ್ಥಾನ’ ಪದ ಸೇರಿದಂತೆ ಕೆಲವು ಸಂಭಾಷಣೆಗಳಿಗೆ ಮ್ಯೂಟ್ ಹಾಕುವಂತೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ:
ದೃಶ್ಯಗಳಲ್ಲೂ ಬದಲಾವಣೆ
ಚಿತ್ರದಲ್ಲಿನ ಮಧ್ಯದ ಬೆರಳು ತೋರಿಸುವ ದೃಶ್ಯವೊಂದನ್ನು ಸಿಜಿ ಎಫೆಕ್ಟ್ ಬಳಸಿ ಮರೆಮಾಚಲಾಗಿದೆ. ಚಿತ್ರತಂಡ ಈ ಎಲ್ಲಾ ತಿದ್ದುಪಡಿಗಳನ್ನು ಪೂರ್ಣಗೊಳಿಸಿದ ಬಳಿಕವೇ ಅಧಿಕೃತ ಸೆನ್ಸಾರ್ ಪ್ರಮಾಣಪತ್ರ ಪಡೆದಿದೆ. ಸಿನಿಮಾ ಒಟ್ಟು 3 ಗಂಟೆ 9 ನಿಮಿಷಗಳ ಅವಧಿಯದ್ದಾಗಿದ್ದು, ಆಕ್ಷನ್ ದೃಶ್ಯಗಳಿಗೆ ಯಾವುದೇ ದೊಡ್ಡ ಕಟ್ ನೀಡಿಲ್ಲ ಎನ್ನಲಾಗಿದೆ.



