October 10, 2026
Saturday, October 10, 2026
spot_img

CINE | ‘ಟಾಕ್ಸಿಕ್’ vs ‘ಧುರಂಧರ್ 2’: ಟಾಪ್ ಲಿಸ್ಟ್ ನಲ್ಲಿ ಯಶ್! 2 ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟ ರಣವೀರ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾ ಬಿಡುಗಡೆಯಾಗುವ ಮುನ್ನವೇ ಭಾರೀ ಚರ್ಚೆಗೆ ಗ್ರಾಸವಾಗಿದೆ. ಟೀಸರ್ ಬಿಡುಗಡೆ ನಂತರ ದೇಶದಾದ್ಯಂತ ಸಿನಿಪ್ರೇಮಿಗಳಲ್ಲಿ ಮೂಡಿದ ನಿರೀಕ್ಷೆ ಇದೀಗ ಹೊಸ ಸಾಧನೆಯನ್ನೂ ದಾಖಲಿಸಿದೆ.

ಜಾಗತಿಕ ಮಟ್ಟದ ಜನಪ್ರಿಯ ಸಿನಿಮಾ ಮಾಹಿತಿ ತಾಣ IMDb ಬಿಡುಗಡೆ ಮಾಡಿದ 2026ರ ಅತ್ಯಂತ ನಿರೀಕ್ಷಿತ ಭಾರತೀಯ ಸಿನಿಮಾಗಳ ಪಟ್ಟಿಯಲ್ಲಿ ‘ಟಾಕ್ಸಿಕ್’ ಮೊದಲ ಸ್ಥಾನ ಪಡೆದುಕೊಂಡಿದೆ.

ಇದನ್ನೂ ಓದಿ:

ಈ ಪಟ್ಟಿಯಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಧುರಂಧರ್ 2 ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಬಳಕೆದಾರರ ಆಸಕ್ತಿಯ ಅಂಕಿಅಂಶಗಳ ಪ್ರಕಾರ ‘ಟಾಕ್ಸಿಕ್’ ಹೆಚ್ಚು ಗಮನ ಸೆಳೆದಿದ್ದು, ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದ ಹೈಪ್ ಕ್ರಿಯೇಟ್ ಮಾಡಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ಈ ಗ್ಯಾಂಗ್‌ಸ್ಟರ್ ಆಕ್ಷನ್ ಸಿನಿಮಾದಲ್ಲಿ ಭರ್ಜರಿ ತಾರಾಗಣವಿದ್ದು, ಟೀಸರ್‌ನಲ್ಲೇ ಯಶ್ ಅವರ ಸ್ಟೈಲಿಶ್ ಲುಕ್ ಪ್ರೇಕ್ಷಕರ ಗಮನ ಸೆಳೆದಿದೆ. ವಿಶೇಷವೆಂದರೆ, ಮಾರ್ಚ್ 19ರಂದು ‘ಟಾಕ್ಸಿಕ್’ ಮತ್ತು ‘ಧುರಂಧರ್ 2’ ಒಂದೇ ದಿನ ತೆರೆಗೆ ಬರಲಿದ್ದು, ಬಾಕ್ಸ್ ಆಫೀಸ್‌ನಲ್ಲಿ ಭಾರೀ ಪೈಪೋಟಿ ನಿರೀಕ್ಷಿಸಲಾಗಿದೆ. ಯಾವ ಸಿನಿಮಾ ಹೆಚ್ಚು ಗೆಲುವು ಸಾಧಿಸಲಿದೆ ಎಂಬ ಕುತೂಹಲ ಇದೀಗ ಸಿನಿರಂಗದಲ್ಲಿ ಹೆಚ್ಚಾಗಿದೆ.

Must Read