October 15, 2026
Thursday, October 15, 2026
spot_img

ಕುವೆಂಪು ವಿವಿಯಲ್ಲಿ ಗಲಭೆ, ಕುಲಪತಿಗಳ ಕಚೇರಿಯನ್ನು ಧ್ವಂಸಗೊಳಿಸಿದ ವಿದ್ಯಾರ್ಥಿಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಲೆನಾಡು ಶಿವಮೊಗ್ಗದ ಶಂಕರಘಟ್ಟದಲ್ಲಿರುವ ಕುವೆಂಪು ವಿಶ್ವವಿದ್ಯಾಲಯದಲ್ಲಿ ಗಲಭೆಯ ವಾತಾವರಣ ಸೃಷ್ಟಿಯಾಗಿದ್ದು, ಸಮಸ್ಯೆಗೆ ಸ್ಪಂದಿಸದ ಕುಲಪತಿಗಳ ವಿರುದ್ಧ ವಿದ್ಯಾರ್ಥಿಗಳು ಸಮರ ಸಾರಿದ್ದಾರೆ.

ಎನ್‌ಎಸ್‌ಯುಐ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆ ಅತಿರೇಕಕ್ಕೆ ಹೋಗಿದ್ದು, ಕುಲಪತಿಗಳ ಕಚೇರಿ ಆವರಣದಲ್ಲಿದ್ದ ಕುರ್ಚಿ, ಗಿಡ, ಪಾಟ್‌ ಇನ್ನಿತರ ವಸ್ತುಗಳನ್ನು ಧ್ವಂಸ ಮಾಡಿದ್ದಾರೆ.

ಕಚೇರಿಯ ಬೋರ್ಡ್‌ಗೆ ಕಪ್ಪು ಮಸಿ ಒರೆಸಿ, ಧಿಕ್ಕಾರ ಕೂಗಿದ್ದಾರೆ. ವಿದ್ಯಾರ್ಥಿಗಳು ಪರೀಕ್ಷೆ ಬರೆದು ಐದು ತಿಂಗಳಾದರೂ ಫಲಿತಾಂಶ ಪ್ರಕಟವಾಗಿಲ್ಲ. ಒಟ್ಟಾರೆ ಮೂರು ಸೆಮಿಸ್ಟರ್‌ಗಳ ರಿಸಲ್ಟ್‌ ಬಾಕಿ ಇದೆ, ಮಾರ್ಕ್ಸ್‌ ಕಾರ್ಡ್‌ ಬಂದಿಲ್ಲ. ಪಾಸಿಂಗ್‌ ಸರ್ಟಿಫಿಕೇಟ್‌ ಇಲ್ಲ. ಡಿಜಿಟಲ್‌ ಮೌಲ್ಯಮಾಪನ ಕೈಬಿಡಿ ಎಂದು ಒತ್ತಾಯಿಸಿದ್ದಾರೆ.

Must Read