July 16, 2026
Thursday, July 16, 2026
spot_img

Cleaning Tips | ಕ್ಲೀನ್ ಅಂತ ಕಾಣಿಸ್ತಾಇದ್ರೂ ಡೇಂಜರ್! ಪ್ರತಿದಿನ ತೊಳೆಯಲೇಬೇಕಾದ ವಸ್ತುಗಳಿವು

ಮನೆ ಸ್ವಚ್ಛವಾಗಿದೆ ಅಂದ್ರೆ ಅದು ಸಂಪೂರ್ಣ ಹೈಜಿನಿಕ್ ಆಗೋದಿಲ್ಲ. ನಮ್ಮ ದಿನನಿತ್ಯ ಬಳಕೆಯ ಕೆಲವು ವಸ್ತುಗಳು ಕಣ್ಣಿಗೆ ಕ್ಲೀನ್ ಆಗಿ ಕಾಣಿಸಿದರೂ, ಅವುಗಳ ಮೇಲೆ ಕಾಣದ ಬ್ಯಾಕ್ಟೀರಿಯಾ ತುಂಬಿಕೊಂಡಿರುತ್ತವೆ. ಇವುಗಳನ್ನು ನಿರ್ಲಕ್ಷ್ಯ ಮಾಡಿದ್ರೆ ಚರ್ಮದ ಸಮಸ್ಯೆ, ಅಲರ್ಜಿ, ಸೋಂಕುಗಳಿಗೂ ಕಾರಣ ಆಗಬಹುದು. ಸಣ್ಣ ಅಭ್ಯಾಸ ಬದಲಿಸಿದ್ರೆ ದೊಡ್ಡ ಆರೋಗ್ಯ ಸಮಸ್ಯೆ ತಪ್ಪಿಸಬಹುದು.

  • ಮೊದಲಿಗೆ ದಿಂಬಿನ ಕವರ್. ಬೆವರು, ಎಣ್ಣೆ, ಧೂಳು ಪ್ರತಿದಿನ ಅಂಟಿಕೊಳ್ಳುತ್ತವೆ. ಆಗಾಗ ಬದಲಾಯಿಸೋದು ಚರ್ಮಕ್ಕೆ ಒಳ್ಳೆಯದು.
  • ಟವೆಲ್ ಕೂಡ ಹಾಗೇ; ಒದ್ದೆಯಾಗಿರೋದರಿಂದ ಬ್ಯಾಕ್ಟೀರಿಯಾ ಬೇಗ ಬೆಳೆಯುತ್ತವೆ.
  • ಸೋಫಾ ಕವರ್ ದಿನಪೂರ್ತಿ ಬಳಕೆಯಿಂದ ಧೂಳು ಸಂಗ್ರಹಿಸಿಕೊಳ್ಳುತ್ತದೆ.
  • ಬಾಚಣಿಗೆಯಲ್ಲಿ ಕೂದಲು, ತೈಲ, ಚರ್ಮದ ಕಣಗಳು ಜಮಾ ಆಗಿ ತಲೆಚರ್ಮ ಸಮಸ್ಯೆ ತರುತ್ತವೆ.
  • ನೀರಿನ ಬಾಟಲಿಯನ್ನೂ ಪ್ರತಿದಿನ ತೊಳೆಯದೇ ಇದ್ದರೆ ಜೀರ್ಣಕ್ರಿಯೆ ತೊಂದರೆ ಉಂಟಾಗಬಹುದು.

ಇದನ್ನೂ ಓದಿ:

ಸ್ವಚ್ಛತೆ ಅನ್ನೋದು ದೊಡ್ಡ ಕೆಲಸ ಅಲ್ಲ; ದಿನಕ್ಕೆ ಕೆಲವು ನಿಮಿಷ ಸಾಕು. ಆರೋಗ್ಯ ಉಳಿಸಿಕೊಳ್ಳೋದು ನಮ್ಮ ಕೈಯಲ್ಲೇ ಇದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !