November 9, 2026
Monday, November 9, 2026
spot_img

ಮಂಕಾಯ್ತು ದೀಪಾವಳಿ ಸಂಭ್ರಮ : ಬೆಂಗಳೂರಿನಲ್ಲಿ ಈವರೆಗೂ 40ಕ್ಕೂ ಹೆಚ್ಚು ಪ್ರಕರಣ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಳಕಿನ ಹಬ್ಬದ ಸಂಭ್ರಮದ ಜೊತೆ ಸುರಕ್ಷತೆಯನ್ನು ಮರೆಯಬೇಡಿ! ಬೆಂಗಳೂರಿನಲ್ಲಿ ಈವರೆಗೂ ಪಟಾಕಿಗೆ ಸಂಬಂಧಿಸಿದ 44 ಪ್ರಕರಣಗಳು ದಾಖಲಾಗಿವೆ. ಹೌದು, ದೆಹಲಿಯಲ್ಲಿ ಪಟಾಕಿ ಸಿಡಿದು ಬಾಲಕನೊಬ್ಬ ಮೃತಪಟ್ಟಿದ್ದರೆ ಬೆಂಗಳೂರಿನಲ್ಲಿ ಪಟಾಕಿ ಸಿಡಿತದಿಂದಾದ ಗಾಯಗಳಿಂದ 44 ಮಂದಿ ಸಂಕಟ ಪಡುತ್ತಿದ್ದಾರೆ.

ವರ್ಷಕ್ಕೆ ಒಮ್ಮೆ ಬರುವ ಹಬ್ಬದ ಸಂಭ್ರಮದ ಜೋಶ್‌ನಲ್ಲಿ ಸೂಕ್ತ ಸುರಕ್ಷತಾ ಕ್ರಮಗಳಿಲ್ಲದೆ ಪಟಾಕಿ ಸಿಡಿಸಿದರೆ ಕಣ್ಣಿಗೆ ಹಾನಿ ಆಗುವುದು ಖಚಿತ. ಪ್ರತೀ ವರ್ಷವೂ ಎಲ್ಲರೂ ಸುರಕ್ಷಿತ ದೀಪಾವಳಿ ಆಚರಣೆ ಮಾಡಿ ಎಂದು ಹೇಳಿದರೂ ಜನ ಇದನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣಿಸುತ್ತಿಲ್ಲ.

ದೆಹಲಿಯಲ್ಲಿ ಪಟಾಕಿ ಸಿಡಿದು 10 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ. ದೆಹಲಿಯ ನರೆಲಾ ಪ್ರದೇಶದಲ್ಲಿ ದುರಂತ ಸಂಭವಿಸಿದೆ. ಕೈಯಲ್ಲೇ ಪಟಾಕಿ ಸ್ಫೋಟಗೊಂಡು ಗಂಭೀರ ಗಾಯಗೊಂಡಿದ್ದ ಬಾಲಕನನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆ ಫಲಿಸದೇ ಬಾಲಕ ಸಾವನ್ನಪ್ಪಿದ್ದಾರೆ. ಸ್ಫೋಟಗೊಂಡ ಪಟಾಕಿ ಯಾವ ಪ್ರಕಾರದ್ದು ಎಂಬ ಬಗ್ಗೆ ಪೊಲೀಸರಿಂದ ತನಿಖೆ ಮಾಡುತ್ತಿದ್ದಾರೆ. ಬೆಂಗಳೂರಿನ ನಾರಾಯಣ ನೇತ್ರಾಲಯದಲ್ಲಿ ಬರೋಬ್ಬರಿ 25 ಪ್ರಕರಣ, ಮಿಂಟೋ ಆಸ್ಪತ್ರೆ 16 ಪ್ರಕರಣ, ಪ್ರಭಾ ಕಣ್ಣಿನ ಆಸ್ಪತ್ರೆಯಲ್ಲಿ 2 ಪ್ರಕರಣ, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಎರಡು ಪ್ರಕರಣ ದಾಖಲಾಗಿದೆ.

ಬಾಲಕನೊಬ್ಬನ ಕಣ್ಣಿಗೆ ತೀವ್ರ ಹಾನಿಯಾಗಿದ್ದು, ದೃಷ್ಟಿ ಬರುತ್ತದೋ ಇಲ್ಲವೋ ಎನ್ನುವ ಅನುಮಾನ ಕಾಡಿದೆ. ಪೋಷಕರು ಮಕ್ಕಳನ್ನು ಪಟಾಕಿ ಹೊಡೆಯಲು ಕಳಿಸುವಾಗ ಈ ಎಲ್ಲ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಸುರಕ್ಷಿತ ದೀಪಾವಳಿ ಎಲ್ಲರ ಆದ್ಯತೆಯಾಗಲಿ.

Must Read