October 15, 2026
Thursday, October 15, 2026
spot_img

ಧರ್ಮೇಂದ್ರ ಪ್ರಧಾನ್ ರಾಜೀನಾಮೆ: ಬೆಳಗಾವಿಯಲ್ಲಿ ಸಂಭ್ರಮಾಚರಿಸಿದ ಕಾಂಗ್ರೆಸ್

ಹೊಸದಿಗಂತ, ಬೆಳಗಾವಿ:

ನೀಟ್ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳ ತೀವ್ರ ಹೋರಾಟದ ನಡುವೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ, ಬೆಳಗಾವಿ ಕಾಂಗ್ರೆಸ್ ಭವನದ ಎದುರು ಶನಿವಾರ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದ್ದಾರೆ.

ಈ ಸಂದರ್ಭ ಮಾತನಾಡಿದ ಮುಖಂಡ ರಾಜಾ ಸಲೀಂ ಕಾಶಮ್ಮನವರ, ಇಂದಿನ ಈ ನಿರ್ಧಾರವು ಭಾರತದ ಯುವಜನತೆಗೆ ಸಿಕ್ಕ ಬೃಹತ್ ಜಯವಾಗಿದೆ ಎಂದರು.

ಇದನ್ನೂ ಓದಿ:

ಕಾಂಗ್ರೆಸ್ ನಾಯಕಿ ಆಯೇಷಾ ಸನದಿ ಮಾತನಾಡಿ, ಇಂದು ವಿದ್ಯಾರ್ಥಿಗಳು ಮತ್ತು ಯುವಕರ ನಿರಂತರ ಹೋರಾಟಕ್ಕೆ ತಕ್ಕ ಜಯ ಸಿಕ್ಕಿದೆ. ಸತ್ಯಕ್ಕೆ ನ್ಯಾಯ ಸಿಕ್ಕ ಅತ್ಯಂತ ಸಂತೋಷದ ದಿನವಿದು. ಯುವಜನರ ಪರವಾಗಿ ಧೃಡವಾಗಿ ನಿಂತು ಹೋರಾಡಿದ ನಾಯಕ ರಾಹುಲ್ ಗಾಂಧಿಯವರಿಗೆ ಧನ್ಯವಾದಗಳು. ಮುಂದಿನ ದಿನಗಳಲ್ಲಿ ದೇಶದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ಸಿಗಲಿದೆ ಎಂಬ ಭರವಸೆ ಮೂಡಿದೆ ಎಂದು ತಿಳಿಸಿದರು.

ಕಾಂಗ್ರೆಸ್ ಮುಖಂಡ ಅಡಿವೇಶ ಇಟಗಿ ಸೇರಿದಂತೆ ಹಲವಾರು ಪಕ್ಷದ ಕಾರ್ಯಕರ್ತರು ಹಾಗೂ ನಾಯಕರು ಈ ಸಂದರ್ಭದಲ್ಲಿ‌ ಉಪಸ್ಥಿತರಿದ್ದರು.

Must Read