September 10, 2026
Thursday, September 10, 2026
spot_img

ಕೇರಳ ಜನತೆಗೆ ಕಾಂಗ್ರೆಸ್ ಸರಕಾರದಿಂದ ಶಾಕ್: ಜೂನ್ 1 ರಿಂದ ಹಾಲಿನ ದರ 4 ರೂ. ಏರಿಕೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕೇರಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಅತ್ತ ಜನರಿಗೆ ಎರಡು ಗ್ಯಾರಂಟಿ ಘೋಷಿಸಿದ ಬೆನ್ನಲ್ಲೇ ಇತ್ತ ಪ್ರತಿ ಲೀಟರ್ ಹಾಲಿನ ದರ 4 ರೂ. ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಜೂನ್ 1 ರಿಂದ ಜಾರಿ

ಕೇರಳ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ(ಮಿಲ್ಮಾ) ಜೂನ್ 1 ರಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್ ಹಾಲಿನ ದರ 4 ರೂ. ಹೆಚ್ಚಳ ಮಾಡುವುದಾಗಿ ಬುಧವಾರ ಘೋಷಿಸಿದೆ.

3.75 ರೂ.ಡೈರಿ ರೈತರಿಗೆ

ಪ್ರತಿ ಲೀಟರ್ ಹಾಲಿಗೆ 4 ರೂ. ಹೆಚ್ಚಳವಾಗಲಿದ್ದು, ಇದರಲ್ಲಿ 3.75 ರೂ. ನೇರವಾಗಿ ಡೈರಿ ರೈತರಿಗೆ ಹೋಗಲಿದೆ ಎಂದು ಮಿಲ್ಮಾ ಅಧ್ಯಕ್ಷ ಕೆ.ಎಸ್. ಮಣಿ ಅವರು ಹೇಳಿದ್ದಾರೆ.

ಕಾರಣ ತಿಳಿಸಿದ ಒಕ್ಕೂಟ

ಇತ್ತೀಚೆಗೆ ಹಾಲು ಉತ್ಪಾದನೆಯಲ್ಲಿ ತೀವ್ರ ಕುಸಿತ ಕಂಡಿದ್ದು, ಜೊತೆಗೆ ಹೈನುಗಾರಿಕೆ ರೈತರು, ಗಗನಕ್ಕೇರುತ್ತಿರುವ ಜಾನುವಾರು ಮೇವು ಮತ್ತು ಕಾರ್ಮಿಕ ವೆಚ್ಚಗಳಿಂದ ತೀವ್ರ ಸಂಕಷ್ಟವನ್ನು ಎದುರಾಗಿದ್ದು, ಹೀಗಾಗಿ ಹಾಲಿನ ದರ ಏರಿಕೆ ಅನಿವಾರ್ಯ ಎಂದು ಒಕ್ಕೂಟಗಳು ತಿಳಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !