October 13, 2026
Tuesday, October 13, 2026
spot_img

ಸಿದ್ದರಾಮಯ್ಯರನ್ನು ಕಾಂಗ್ರೆಸ್‌ Use and Throw ಮಾಡಿದೆ: ಆರ್‌. ಅಶೋಕ್‌ ಗಂಭೀರ ಆರೋಪ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕಾಂಗ್ರೆಸ್‌ನವರಿಗೆ ಯಾವ ಕೃತಜ್ಞತೆಯೂ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ಚೂರಿ ಹಾಕಿ ಈ ವಯಸ್ಸಿನಲ್ಲಿ ಕೋರ್ಟ್‌ ಕಚೇರಿ ಓಡಾಡುವಂತೆ ಮಾಡಿದೆ. ಅವರನ್ನು ಯೂಸ್‌ ಆಂಡ್‌ ಥ್ರೋ ರೀತಿ ಬಳಸಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್‌. ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ನಾನು ಬಹಳ ನೋವಿನಿಂದ, ಒಲ್ಲದ ಮನಸ್ಸಿನಿಂದ ಹೇಳ್ತಿದ್ದೀನಿ. ಸಿದ್ದರಾಮಯ್ಯ ದೇವರಾಜ ಅರಸು ಅವರ ದಾಖಲೆ ಮುರಿದವರು. ಸಿಎಂ ಸ್ಥಾನವನ್ನೇ ತ್ಯಾಗ ಮಾಡಿದವರು, ಅನ್ನರಾಮಯ್ಯ ಎಂದು ಹೇಳಿಸಿಕೊಂಡವರು. ಆದರೆ ಇವತ್ತು ಸಿದ್ದರಾಮಯ್ಯ ಅವರಿಗೆ ಕೋರ್ಟ್ ಮೆಟ್ಟಿಲೇರುವ ನೋವು ಕೊಟ್ಟಿದ್ದೇ ಕಾಂಗ್ರೆಸ್. ಕೃತಜ್ಞತೆ ಇಲ್ಲದ ಕಾಂಗ್ರೆಸ್, ಕಪಟ ಕಾಂಗ್ರೆಸ್, ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ ಇದು. ತಡೆಯಾಜ್ಞೆ ಕೋರಿ ಸಿದ್ದರಾಮಯ್ಯ ಕೋರ್ಟ್ ಮೆಟ್ಟಿಲೇರುವ ದಯನೀಯ ಸ್ಥಿತಿಗೆ ತಂದಿದ್ದಾರೆ. ಅವರನ್ನು ಯೂಸ್ ಆಂಡ್ ಥ್ರೋ ಮಾಡಿದ್ದಾರೆ. ಸ್ಟಿಂಗ್ ಆಪರೇಷನ್ ಬಗ್ಗೆ, ವಿಡಿಯೋಗಳ ಬಗ್ಗೆ ಕೂಡಲೇ ಎಫ್‌ಐಆರ್ ಆಗಬೇಕು ಎಂದು ಕೆಂಡಕಾರಿದ್ದಾರೆ.

ರಾಜ್ಯದಲ್ಲಿ ಭೀಕರ ಬರಗಾಲವಿದೆ. ರೈತರು ಸರ್ಕಾರದ ಬಿಡಿಗಾಸಿನ ಹಣವನ್ನು ವಾಪಸ್ಸು ಕೊಡ್ತಿದ್ದಾರೆ. ಇದ್ಯಾವುದರ ಬಗ್ಗೆ ಗಮನ ಇಲ್ಲದೇ ಕಾಂಗ್ರೆಸ್ ಸರ್ಕಾರ ಈ ಸ್ಟಿಂಗ್ ಆಪರೇಷನ್, ಸಿಡಿಯಲ್ಲೇ ಮುಳುಗಿ ಹೋಗಿದೆ. ಡಿಕೆ ಶಿವಕುಮಾರ್ ಸಿಎಂ ಆಗಿ ದೆಹಲಿಯಲ್ಲೇ ಹೆಚ್ಚು ಕಾಲ ಕಳೆದಿದ್ದಾರೆ. ರಾಜ್ಯದ ಜನರ ಬಗ್ಗೆ ಒಂಚೂರು ಕಾಳಜಿ ಇಲ್ಲದೇ, ಸ್ಟಿಂಗ್ ಆಪರೇಷನ್ ಮಾಡಿಸಿದ್ದು ಯಾರೆಂದು ಇದೇ ಚರ್ಚೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

Must Read