September 25, 2026
Friday, September 25, 2026
spot_img

ಬಿಗ್‌ಬಾಸ್‌ ನಿರ್ಧಾರಕ್ಕೆ ಬೆಚ್ಚಿಬಿದ್ದ ಸ್ಪರ್ಧಿಗಳು: ಮೂರು ಗಂಟೆಯ ಎಪಿಸೋಡ್‌, ಎರಡು ಎಲಿಮಿನೇಷನ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಗ್‌ಬಾಸ್‌ ಸೀಸನ್‌ 13 ರೋಚಕ ಘಟ್ಟವನ್ನು ತಲುಪಿದೆ. ಮಿಡ್‌ನೈಟ್‌ ಎಲಿಮಿನೇಷನ್‌ನಲ್ಲಿ ನಟ ತಾಂಡವ್‌ ರಾಮ್‌ ಔಟ್‌ ಆದ ನಂತರ ಬಿಗ್‌ಬಾಸ್‌ ಮನೆಯಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು ಎಂದು ಎಲ್ಲರೂ ನಿರ್ಧರಿಸಿದ್ದಾರೆ.

ಈ ಭಾನುವಾರದಂದು ಡಬಲ್‌ ಧಮಾಕಾ ನಡೆಯಲಿದೆ. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮ ಸತತವಾಗಿ ಮೂರು ಗಂಟೆಗಳ ಕಾಲ ನಡೆಯಲಿದೆ. ಈ ಬಾರಿ ಇಬ್ಬರು ಎಲಿಮಿನೇಟ್‌ ಆಗುವ ಸಾಧ್ಯತೆ ಇದೆ. ಮನೆಗೆ ಮತ್ತೊಂದು ‘ಎಮರ್ಜೆನ್ಸಿ ಎಕ್ಸಿಟ್’ ಎದುರಾಗಿದ್ದು, ಮತ್ತಿಬ್ಬರು ಸ್ಪರ್ಧಿಗಳು ಹೊರಹೋಗುವ ಸೂಚನೆ ಸಿಕ್ಕಿದೆ. ವೋಟಿಂಗ್ ಆಧಾರದ ಮೇಲೆ ಸ್ಪರ್ಧಿಗಳ ಭವಿಷ್ಯ ನಿರ್ಧಾರವಾಗಲಿದೆ. ಈ ರೋಚಕ ಸಂಚಿಕೆಯನ್ನು ಶನಿವಾರ ಮತ್ತು ಭಾನುವಾರ ರಾತ್ರಿ 8 ಗಂಟೆಗೆ ಕಲರ್ಸ್ ಕನ್ನಡ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು.

ಇದುವರೆಗೆ ಮನೆಯೊಳಗಿನ ಆಟ, ವ್ಯಕ್ತಿತ್ವ ಹಾಗೂ ವಿವಿಧ ಸಂದರ್ಭಗಳಲ್ಲಿ ಸ್ಪರ್ಧಿಯ ನಡೆ-ನುಡಿಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹೀಗಾಗಿ ಈ ಎಕ್ಸಿಟ್ ಕೇವಲ ಮನೆಯ ಸದಸ್ಯರಿಗೆ ಮಾತ್ರವಲ್ಲದೆ,ತಮ್ಮ ನೆಚ್ಚಿನ ಸ್ಪರ್ಧಿಯನ್ನು ವಿನ್ನರ್ ಆಗಿ ನೋಡಲು ಬಯಸಿದ್ದ ವೀಕ್ಷಕರಿಗೂ ಶಾಕ್ ನೀಡಲಿದೆ.

ಇದರ ಜೊತೆಗೆ ಸೀಸನ್‌ ಏಳರ ಸ್ಪರ್ಧಿಯಾಗಿದ್ದ ಡ್ಯಾನ್ಸರ್‌ ಕಿಶನ್‌ ಬೆಳಗಲಿ ಕೂಡ ಮತ್ತೆ ಬಿಗ್‌ಬಾಸ್‌ಗೆ ಎಂಟ್ರಿ ಕೊಡ್ತಿದ್ದೀನಿ ಎಂದು ಹೇಳಿಕೊಂಡಿದ್ದಾರೆ. ಈ ಬಾರಿ ಹಲವು ಟ್ವಿಸ್ಟ್‌ & ಟರ್ನ್‌ಗಳಿದ್ದು, ಶೋ ರೋಚಕವಾಗಿದೆ ಎಂದು ಜನ ಹೇಳ್ತಿದ್ದಾರೆ.

Must Read