September 10, 2026
Thursday, September 10, 2026
spot_img

ಹಂಪಿಯಲ್ಲಿ ಅನಧಿಕೃತ ಹೋಮ್‌ಸ್ಟೇಗಳ ಮೇಲೆ ದಿಢೀರ್‌ ದಾಳಿ: ಬಂದ್‌ ಮಾಡುವಂತೆ ಸೂಚನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ವಿಶ್ವವಿಖ್ಯಾತ ಹಂಪಿಯಲ್ಲಿ ಗಲ್ಲಿಗಲ್ಲಿಗೂ ಹೋಮ್‌ ಸ್ಟೇಗಳಿದೆ. ಎಷ್ಟೋ ಮಂದಿ ತಮ್ಮ ಮನೆಗಳನ್ನು ಹೋಮ್‌ ಸ್ಟೇ ಆಗಿ ಬದಲಾಯಿಸಿ ಒಂದು ರೂಮ್‌ ಅಥವಾ ಸಣ್ಣ ಭಾಗವನ್ನು ಮಾತ್ರ ಬಳಸುತ್ತಾರೆ. ಇಂದು ಅನಧಿಕೃತ ಹೋಮ್‌ಸ್ಟೇಗಳ ಮೇಲೆ ದಾಳಿ ನಡೆದಿದ್ದು, ಈ ಕ್ಷಣವೇ ಎಲ್ಲವನ್ನೂ ಬಂದ್‌ ಮಾಡಲು ಹೇಳಲಾಗಿದೆ.

ವಿಜಯನಗರ ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಇಂದು ದಿಢೀರ್‌ ದಾಳಿ ನಡೆಸಿ, ಅನಧಿಕೃತ ಸ್ಟೇಗಳ ಮಾಲೀಕರ ಚಳಿ ಬಿಡಿಸಿದ್ದಾರೆ. ಹೋಮ್‌ ಸ್ಟೇ ಮಾಡುವುದಾದರೆ ಪ್ರವಾಸೋದ್ಯಮ ಇಲಾಖೆ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಹಂಪಿ ವಿಶ್ವ ಪರಂಪರೆ ನಿರ್ವಹಣಾ ಪ್ರಾಧಿಕಾರ ಆದೇಶ ಹೊರಡಿಸಿತ್ತು.

ಯಾವುದೇ ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತಿದ್ದ 40 ರೆಸಾರ್ಟ್ಗಳನ್ನು ಬಂದ್‌ ಮಾಡಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !