July 10, 2026
Friday, July 10, 2026
spot_img

ದಿನಭವಿಷ್ಯ: ದುಡುಕಿ ಯಾವುದೇ ನಿರ್ಧಾರ ತಗೋಬೇಡಿ, ಸಮಸ್ಯೆಯೊಂದು ನಿವಾರಣೆಯಾಗಲಿದೆ

ಮೇಷ
ಈ ದಿನ ಪ್ರಗತಿ ಸಾಧಿಸಿದರೂ ನಿಮಗೆ ಮಾತ್ರ ತೃಪ್ತಿಯಿಲ್ಲ. ನಿಮ್ಮ ಮನಸ್ಸು ಬೇರೇನನ್ನೋ ಬಯಸುತ್ತದೆ. ಮನೆಯಲ್ಲಿ ಕಲಹವಾದೀತು.
ವೃಷಭ
ಪ್ರಮುಖ ವಿಷಯದಲ್ಲಿ ನಿಮ್ಮ ನಿಲುವು ಬದಲಿಸುವ ಸನ್ನಿವೇಶ ಉಂಟಾದೀತು. ದುಡುಕಿನ ನಿರ್ಧಾರ ತಾಳದಿರಿ. ಎಲ್ಲರ ಜತೆ ಸೌಹಾರ್ದತೆ ಇರಲಿ.
ಮಿಥುನ
ನಿಮ್ಮ ಪಾಲಿಗೆ ವಿಶೇಷ ದಿನ. ಬಯಸಿದ ಬೆಳವಣಿಗೆ ಸಂಭವ. ಸಮಸ್ಯೆಯೊಂದು ನಿವಾರಣೆ, ಕೆಲಸ ಸುಲಲಿತ. ಧನಪ್ರಾಪ್ತಿ.
ಕಟಕ
ನಿಮ್ಮ ನಿರ್ಧಾರ ಬೇರೆಯವರ ಮೇಲೆ ಹೇರಬೇಡಿ. ಅದು ವಿರಸಕ್ಕೆ ಹೇತುವಾದೀತು. ಕೌಟುಂಬಿಕ ಶಾಂತಿಗೆ ಭಂಗ. ಆರ್ಥಿಕ ಕೊರತೆ.
ಸಿಂಹ
ಹೊಸ ಪಾಠ ಕಲಿಯುವಂತಹ ಪ್ರಸಂಗ ಉಂಟಾದೀತು. ದೊಡ್ಡ ಬಿಕ್ಕಟ್ಟು ಎದುರಾದರೂ ಬಳಿಕ ಪರಿಹಾರ ಕಂಡು ನೆಮ್ಮದಿ ಉಂಟಾಗಲಿದೆ.
ಕನ್ಯಾ
ಕೆಲಸದಲ್ಲಿ ತಪ್ಪು ಘಟಿಸದಂತೆ ಎಚ್ಚರ ವಹಿಸಿ. ಕೆಲವರು ಅದನ್ನೆ ಹಿಗ್ಗಿಸಬಹುದು. ಮಾನಕ್ಕೆ ಕುಂದು ತರುವ ಬೆಳವಣಿಗೆ ಸಂಭವಿಸಬಹುದು.
ತುಲಾ
ಮನಸ್ಸಿಗೆ ನಿರಾಳತೆ ತರುವಂತಹ ಬೆಳವಣಿಗೆ. ಕಾರ್ಯ ಸಾಫಲ್ಯ, ವಿರಸ ಮುಕ್ತಿ. ಅನಿರೀಕ್ಷಿತ ಖರ್ಚು ಬಂದೀತು. ಆತ್ಮೀಯ ಬಂಧು ಭೇಟಿ.
ವೃಶ್ಚಿಕ
ಅನ್ಯರ ಮೆಚ್ಚಿಸಲು ಅನವಶ್ಯ ಪ್ರಯತ್ನ ಬೇಡ. ನಿಮ್ಮ ಕಾರ್ಯ ನಿಷ್ಠೆಯಿಂದ ಮಾಡಿ. ಹಣದ ಬಿಕ್ಕಟ್ಟು ತಲೆಬೇನೆ ತಂದೀತು.
ಧನು
ಆರ್ಥಿಕ ಪ್ರಗತಿ ಉತ್ತಮ. ಆಪ್ತರ ಜತೆ ಭಿನ್ನಾಭಿಪ್ರಾಯ ಉಂಟಾದೀತು. ಸ್ನೇಹಿತ ನಿಮ್ಮ ವಿರೋಧಿಯಾಗಿ ಬದಲಾಗಬಹುದು.
ಮಕರ
ಒತ್ತಡ ನಿವಾರಣೆ. ಮನಸ್ಸಿಗೆ ನಿರಾಳತೆ. ಕೆಲವು ಬೆಳವಣಿಗೆ ಅದಕ್ಕೆ ಕಾರಣ. ಆಪ್ತರ ಜತೆ ಮಾತುಕತೆ ನೆಮ್ಮದಿ ತರಲಿದೆ. ಆರ್ಥಿಕ ಪ್ರಗತಿ ಉತ್ತಮ.
ಕುಂಭ
ಕೆಲಸದಲ್ಲಿ ಅಧಿಕ ಒತ್ತಡ. ತಾಳ್ಮೆಯ ವರ್ತನೆ ಅಗತ್ಯ. ಇತರರ ಪ್ರಲೋಭನೆಗೆ ಒಳಗಾಗಿ ಅಡ್ಡದಾರಿ ಹಿಡಿಯದಿರಿ. ಆರೋಗ್ಯ ಸಮಸ್ಯೆ.
ಮೀನ
ವಿವೇಕದಿಂದ ಕಾರ್ಯ ಎಸಗಿ. ಇಲ್ಲವಾದರೆ ಕೆಟ್ಟ ಫಲಿತಾಂಶ ಸಂಭವ. ಅನಿರೀಕ್ಷಿತ ಧನಲಾಭ. ಆಪ್ತ ಬಂಧು ಭೇಟಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !