June 14, 2026
Sunday, June 14, 2026
spot_img

ದಿನಭವಿಷ್ಯ: ನಿಮ್ಮ ಖಾಸಗಿ ವಿಷಯ ಇತರರ ಜತೆ ಹಂಚಿಕೊಳ್ಳದಿರಿ, ಖರ್ಚು ನಿಯಂತ್ರಣ ಅಗತ್ಯ

ಮೇಷ
ಒಳ್ಳೆ ಅವಕಾಶ ಸಿಕ್ಕಿದಾಗ ಕೂಡಲೇ ಬಾಚಿಕೊಳ್ಳಿ. ಆರ್ಥಿಕ ಸ್ಥಿತಿ ಉತ್ತಮವಿದ್ದರೂ ಖರ್ಚು ನಿಯಂತ್ರಣ ಅವಶ್ಯ. ಸಂಗಾತಿ ಜತೆ ವಾಗ್ವಾದ.
ವೃಷಭ
ಸಂಬಂಧದಲ್ಲಿ ತಿರುವು ಉಂಟಾದೀತು. ಬೇಸರದ ಬೆಳವಣಿಗೆ. ದೈಹಿಕ ನೋವು ಸಂಭವ. ಅನಿವಾರ್ಯ ಖರ್ಚು ಒದಗಿಬರಲಿದೆ.
ಮಿಥುನ
ಸರಿಯಾದ ದಿಕ್ಕಿನಲ್ಲಿ ನಿಮ್ಮ ವ್ಯವಹಾರ ಸಾಗುವುದು. ಕೌಟುಂಬಿಕ ಬಂಧ ಬಿಗಿಪಡಿಸಿ. ಅವರೆಡೆಗೆ ಕಾಳಜಿ ತೋರಿ. ಧನವ್ಯಯ ಅಧಿಕ.
ಕಟಕ
ವೃತ್ತಿ ಸಂಬಂಧಿತ ಸಮಸ್ಯೆ ಒಮ್ಮೆಗೆ ಪರಿಹಾರ ಕಾಣಲಿದೆ. ಲಘು ಅನಾರೋಗ್ಯ ಸಂಭವ. ಖರೀದಿ ಹುಮ್ಮಸ್ಸು. ಆಪ್ತ ಬಂಧು ಭೇಟಿ.
ಸಿಂಹ
ನಿರೀಕ್ಷೆ ಈಡೇರದೆ ನಿರಾಶೆ. ನಿಮ್ಮ ಖಾಸಗಿ ವಿಷಯ ಇತರರ ಜತೆ ಹಂಚಿಕೊಳ್ಳದಿರಿ. ಕೆಟ್ಟ ಆಹಾರ ಸೇವನೆಯಿಂದ ಅಜೀರ್ಣ ಸಮಸ್ಯೆ.
ಕನ್ಯಾ
ಹರ್ಷದ ದಿನ. ನಿರೀಕ್ಷೆ ಈಡೇರಿಕೆ. ದೈಹಿಕ ನೋವಿದ್ದರೆ ನಿವಾರಣೆ. ದೂರದ ಬಂಧು ಭೇಟಿಯಿಂದ ಸಂತೋಷ. ಆರ್ಥಿಕ ಪ್ರಗತಿ.
ತುಲಾ
ಅಡ್ಡಿಗಳನ್ನು ನಿವಾರಿಸುವುದು ನಿಮಗೆ ಗೊತ್ತು. ಅದರಲ್ಲಿ ಸಫಲತೆ ಕಾಣುವಿರಿ. ಸಂಗಾತಿಯ ನಿಲುವು ಒಪ್ಪಿಕೊಳ್ಳುವ ಸಮಯವಿದು.
ವೃಶ್ಚಿಕ
ಮುಖ್ಯ ವಿಚಾರದಲ್ಲಿ ಆಯ್ಕೆಯ ಗೊಂದಲ ನಿಮ್ಮನ್ನು ಕಾಡುವುದು. ವಿವೇಚಿಸಿ ನಿರ್ಧರಿಸಿ. ಕಾಡುತ್ತಿದ್ದ ನೋವು ಪರಿಹಾರ.
ಧನು
ಎಲ್ಲವನ್ನು ಹಗುರವಾಗಿ ಪರಿಗಣಿಸುವ ಧೋರಣೆ ಬಿಡಿ. ಗಂಭೀರ ವರ್ತನೆ ಈಗಿನ ಅಗತ್ಯ. ಮನೆಯಲ್ಲಿ ಶಾಂತಿ ಕಲಕುವ ವಿದ್ಯಮಾನ.
ಮಕರ
ಅಗತ್ಯ ಬಿದ್ದಾಗ ವಿರೋಧಿಗಳ ಸ್ನೇಹ ಮಾಡಲು ಹಿಂಜರಿಕೆ ಬೇಡ. ಇದು ನಿಮ್ಮ ಈಗಿನ ಪರಿಸ್ಥಿತಿಗೆ ಅನ್ವಯ. ಆರ್ಥಿಕ ಒತ್ತಡ ಅಧಿಕ.
ಕುಂಭ
ಕೆಲವರ ಜತೆ ಹೆಚ್ಚು ಸಂವೇದನೆಯಿಂದ ವರ್ತಿಸಿ. ಅವರ ಮನಸ್ಸಿಗೆ ನೋವು ತರಬೇಡಿ. ಕಾಯುತ್ತಿದ್ದ ಶುಭ ಸುದ್ದಿ ಇಂದು ಸಿಗಬಹುದು.
ಮೀನ
ಸಂಬಂಧ ಉಳಿಸಲು ಆದ್ಯತೆ ಕೊಡಿ. ಇತರರ ಭಾವನೆಗೆ ಬೆಲೆ ಕೊಡಿ. ನಿಮ್ಮದೇ ನಿಲುವು ಹೇರಬೇಡಿ. ಆರ್ಥಿಕ ಒತ್ತಡ ನಿವಾರಣೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !