ಮೇಷ
ಕೌಟುಂಬಿಕವಾಗಿ ಹೊಸ ಸಮಸ್ಯೆ ಸಂಭವ. ಸೌಹಾರ್ದತೆಗೆ ಧಕ್ಕೆ. ಕಾಪಾಡಿ. ದುಡುಕಿನಿಂದ ಪ್ರತಿಕ್ರಿಯಿಸಬೇಡಿ. ಹಣದ ಕೊರತೆ.
ವೃಷಭ
ಇಲ್ಲದ ವಿಷಯಕ್ಕೆ ಚಿಂತೆ ಮಾಡುವಿರಿ. ಎಲ್ಲ ಸರಿಯಿದ್ದರೂ ಏನೋ ಕೊರತೆಯ ಭಾವ. ಧ್ಯಾನ ನಿಮಗೆ ಸಹಕಾರಿಯಾದೀತು.
ಮಿಥುನ
ನಿಮ್ಮ ವರ್ತನೆಯಿಂದ ಎಲ್ಲರ ಮನ ಗೆಲ್ಲುವಿರಿ. ಪ್ರೀತಿಯಲ್ಲಿ ಯಶಸ್ಸು. ಮಕ್ಕಳಿಂದ ಸಂತೋಷ. ಹೆಚ್ಚುತ್ತಿರುವ ಖರ್ಚು ಚಿಂತೆಗೆ ಕಾರಣವಾದೀತು.
ಕಟಕ
ನಿರಾಳವಾಗಿರಲು ಅವಕಾಶ ಸಿಗದು. ಅನವಶ್ಯ ಚಿಂತೆ. ದೃಢವಾಗಿ ವರ್ತಿಸಿದರೆ ಎಲ್ಲವನ್ನು ನಿಭಾಯಿಸಬಲ್ಲಿರಿ. ಆರೋಗ್ಯ ಸುಸ್ಥಿರ.
ಸಿಂಹ
ಪ್ರತಿಕೂಲ ಪರಿಸ್ಥಿತಿ ಇದ್ದರೂ ಅದನ್ನು ನಿಮ್ಮ ಪರವಾಗಿ ಬದಲಿಸಲು ಯತ್ನಿಸಿ. ಕೌಟುಂಬಿಕ ಭಿನ್ನಾಭಿಪ್ರಾಯ ಸಂಭವ. ಪ್ರಬುದ್ಧವಾಗಿ ವರ್ತಿಸಿ.
ಕನ್ಯಾ
ಗುರಿ ಸಾಧನೆಗೆ ಪೂರಕ ದಿನ. ಸಂಬಂಧದಲ್ಲಿ ಒಡಕು ಮೂಡದಂತೆ ಎಚ್ಚರದಿಂದ ನಡಕೊಳ್ಳಿ. ವೃದ್ಧರು ಆಹಾರದಲ್ಲಿ ಎಚ್ಚರ ವಹಿಸಿ.
ತುಲಾ
ನಿಮ್ಮ ಕಾರ್ಯದಲ್ಲಿ ದಿನವಿಡೀ ವ್ಯಸ್ತ. ಇತರರೂ ತಮ್ಮ ಸಮಸ್ಯೆ ಹಿಡಿದುಕೊಂಡು ನಿಮ್ಮ ಬಳಿ ಬರುತ್ತಾರೆ. ನೆಮ್ಮದಿ, ವಿರಾಮ ದೂರ.
ವೃಶ್ಚಿಕ
ಬಿಡುವಿರದ ದಿನ. ಹೆಚ್ಚು ಹೊಣೆಗಾರಿಕೆ. ಸಂಬಂಧದಲ್ಲಿ ಮೂಡಿದ ಬಿಕ್ಕಟ್ಟು ಬಗೆಹರಿಸಲು ಹೆಚ್ಚು ಸಮಯ ವ್ಯಯ. ಖರೀದಿಯಿಂದ ಖರ್ಚು.
ಧನು
ನಿಮ್ಮ ಬದುಕಲ್ಲಿ ಕೆಲವು ಬದಲಾವಣೆ ಉಂಟಾದೀತು. ಗುಣಾತ್ಮಕ ಪ್ರಗತಿ. ಸಂಬಂಧ ಗಟ್ಟಿಗೊಳ್ಳಲಿದೆ. ದೈಹಿಕ ಶ್ರಮ ಅತಿಯಾಗಿಸಬೇಡಿ.
ಮಕರ
ಹಳೆಯ ಚಿಂತೆ ಮರೆತು ಮುಂದೆ ಸಾಗಿರಿ. ಒತ್ತಡವನ್ನು ನಿಭಾಯಿಸುವ ಕಲೆ ಅರಿಯಿರಿ. ಸಣ್ಣ ವಿಷಯಕ್ಕೆ ದುಡುಕಿನ ವರ್ತನೆ ತೋರದಿರಿ.
ಕುಂಭ
ಕುಟುಂಬ, ಸ್ನೇಹಿತರ ಜತೆ ಆತ್ಮೀಯವಾಗಿ ಕಾಲ ಕಳೆಯುವ ಅವಕಾಶ. ಆದರೂ ಯಾವುದೋ ಕೊರಗು ಮನದೊಳಗೆ
ಕಾಡುತ್ತಿರುತ್ತದೆ.
ಮೀನ
ಸಣ್ಣ ವಿಷಯಕ್ಕೂ ಅತಿರೇಕದ ಪ್ರತಿಕ್ರಿಯೆ ತೋರದಿರಿ. ಸಮಾಧಾನದ ನಡೆ ಅವಶ್ಯ. ಇತರರ ಜತೆ ಅನ್ಯೋನ್ಯತೆ ಸಾಧಿಸಿ, ಅದರಿಂದ ಕಾರ್ಯಸಿದ್ಧಿ.



