April 18, 2026
Saturday, April 18, 2026
spot_img

ದಿನಭವಿಷ್ಯ: ಸಣ್ಣ ವಿಷಯಗಳಿಗೆ ಹೆಚ್ಚು ಚಿಂತೆ ಬೇಡ, ಮನೆಯವರು ಏನ್ ಹೇಳ್ತಾರೋ ಕೇಳಿ

ಮೇಷ
ಎಲ್ಲವೂ ಇಂದು ನಿಮಗೆ ಪೂರಕವಾಗಿ ಸಾಗುವುದು. ಈ ದಿನ ಸದುಪಯೋಗ ಮಾಡಿಕೊಳ್ಳಿ. ಪ್ರಮುಖ ಕಾರ್ಯ ಮುಗಿಸಿಕೊಳ್ಳಿ.
ವೃಷಭ
ಆರ್ಥಿಕ ಪ್ರಗತಿ ಸಾಧಾರಣ. ಅಧ್ಯಾತ್ಮದತ್ತ ಆಸಕ್ತಿ. ಸಣ್ಣ ವಿಷಯಗಳಿಗೆ ಹೆಚ್ಚು ಚಿಂತಿಸಬೇಡಿ. ದೃಢ ಮನಸ್ಸು ಪ್ರದರ್ಶಿಸಿ. ಕ್ರೀಡಾಳುಗಳಿಗೆ ಯಶಸ್ಸು.
ಮಿಥುನ
ನಿಮ್ಮ ಉದ್ದೇಶ ಇಂದು ಈಡೇರಲಿದೆ. ತುಸು ಹೆಚ್ಚಿನ ಪ್ರಯತ್ನ ಬೇಕಾದೀತು. ಮನೆಯವರ ಸಲಹೆಗೆ ಕಿವಿಗೊಡಿ, ತಿರಸ್ಕರಿಸಬೇಡಿ.
ಕಟಕ
ನಿಮ್ಮ ವ್ಯವಹಾರ ವಿಸ್ತರಣೆ ಇಂದಿನ ಗುರಿ ಆಗಿರಲಿ. ಅದರಲ್ಲಿ ಯಶ ಸಿಗಲಿದೆ. ಉದ್ಯೋಗ ಹುಡುಕಾಟ ಸಫಲ. ಚಿಕಿತ್ಸ್ಸೆ ಗೆ ಹಣ ಖರ್ಚು.
ಸಿಂಹ
ವ್ಯಕ್ತಿಯೊಬ್ಬರ ಆಕರ್ಷಣೆ ಒಳಗಾಗುವ ಸಂಭವ. ಸ್ನೇಹಪ್ರಾಪ್ತಿ. ಉದ್ಯೋಗ ಅರಸುವವರಿಗೆ ಶುಭ ಸುದ್ದಿ. ಹೂಡಿಕೆಯಿಂದ ಲಾಭ.
ಕನ್ಯಾ
ಕೆಲಸದಲ್ಲಿ ಬದ್ಧತೆ ಇರಲಿ. ಪ್ರತಿಫಲ ತಾನಾಗಿ ಸಿಗುವುದು. ಆತ್ಮೀಯರ ಒಡನಾಟ ಉತ್ಸಾಹ ತುಂಬಲಿದೆ. ಖರೀದಿ ಖರ್ಚು ಹೆಚ್ಚಿಸಲಿದೆ.
ತುಲಾ
ಫಲಪ್ರದ ದಿನ. ಕೆಲಸದಲ್ಲಿ ಅಪೇಕ್ಷಿತ ಪ್ರಗತಿ. ಹೊಣೆಗಾರಿಕೆ ಸಮರ್ಥ ನಿರ್ವಹಣೆ. ಕುಟುಂಬಸ್ಥರ ಜತೆ ಸಮಯ ಕಳೆಯಿರಿ.
ವೃಶ್ಚಿಕ
ನಿಮಗೆ ಕೆಟ್ಟದ್ದನ್ನು ಬಯಸುವವರ ಒತ್ತಡಕ್ಕೆ ಮಣಿಯಬೇಡಿ. ಎದುರಿಸಿ ನಿಲ್ಲಿ. ಕೌಟುಂಬಿಕ ಬದುಕು ಏರುಪೇರು ಎದುರಿಸೀತು. ಸಮಚಿತ್ತವಿರಲಿ.
ಧನು
ನಿಮ್ಮ ಸುತ್ತಲಿನ ಜನರಲ್ಲಿ ಉತ್ಸಾಹ ತುಂಬುವ ಕಾರ್ಯ ನಿಮ್ಮಿಂದ ಆಗಲಿದೆ. ಹಿನ್ನಡೆಗೆ ಅಂಜಬೇಕಿಲ್ಲ. ಸೂಕ್ತ ಬೆಂಬಲ ಲಭ್ಯ.
ಮಕರ
ಹಣದ ವಿಚಾರದಲ್ಲಿ ನಿರ್ಲಕ್ಷ್ಯ ಬೇಡ. ನಷ್ಟ ಆದೀತು. ವೃತ್ತಿಯಲ್ಲಿ ಬಿಡುವಿಲ್ಲದ ಕೆಲಸ. ಆರೋಗ್ಯ ಕಡೆಗಣಿಸದಿರಿ. ಆಪ್ತ ಬಂಧು ಭೇಟಿ.
ಕುಂಭ
ದೈನಂದಿನ ಕಾರ್ಯ ಬೇಸರ ತರಬಹುದು. ಹೊಸತನಕ್ಕೆ ತುಡಿತ. ಆಪ್ತರ ಜತೆ ಪ್ರವಾಸ ಹೊರಡಿ. ಕೌಟುಂಬಿಕ ಸಮಸ್ಯೆ ಪರಿಹಾರದ ಸಂಕೇತ.
ಮೀನ
ಅಸಾಧ್ಯ ಕೆಲಸ ಇಂದು ಸಾಧಿಸುವಿರಿ. ಶ್ರಮ ಹೆಚ್ಚು ಬೇಕಾದೀತು. ಹಣದ ವ್ಯವಹಾರದಲ್ಲಿ ಲಾಭ. ಹಳೆ ಸ್ನೇಹಿತರ ಭೇಟಿ ಸಂಭವ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !