June 7, 2026
Sunday, June 7, 2026
spot_img

ದಿನಭವಿಷ್ಯ: ಮನೆಯವರೊಂದಿಗೆ ಹೊಂದಾಣಿಕೆ ಮುಖ್ಯ, ಸಣ್ಣ ಪುಟ್ಟ ವಿಷ್ಯಕ್ಕೆ ಜಗಳ ಮಾಡ್ಬೇಡಿ

ಮೇಷ
ಭಾವನಾತ್ಮಕ ಏರುಪೇರು. ಗ್ರಹಗತಿ ಅಷ್ಟೇನೂ ಪೂರಕವಾಗಿಲ್ಲ. ಮುಖ್ಯ ನಿರ್ಧಾರ ಕಾರ್ಯಗತ ಮಾಡಲು ಕಾಯುವುದು ಒಳಿತು.
ವೃಷಭ
ಆರ್ಥಿಕವಾಗಿ, ವೈಯಕ್ತಿಕವಾಗಿ ಸಮಸ್ಯೆ ಎದುರಿಸುವಿರಿ. ಪರಿಸ್ಥಿತಿ ನಿಮಗೆ ಪ್ರತಿಕೂಲ. ಇಷ್ಟದೇವರ ಪ್ರಾರ್ಥನೆ ಮಾಡಿ, ಒಳಿತಾಗುವುದು.
ಮಿಥುನ
ವೃತ್ತಿ ಕೌಶಲ ಸುಧಾರಣೆಗೆ ಪ್ರೇರಣೆ ಸಿಗಲಿದೆ. ಮನೆಯವರ ಜತೆ ಹೊಂದಾಣಿಕೆ ಮುಖ್ಯ. ಸಣ್ಣ ವಿಷಯಕ್ಕೆ ಸಂಘರ್ಷಕ್ಕೆ ಇಳಿಯದಿರಿ.
ಕಟಕ
ಸಂಗಾತಿಯ ಅಭಿಪ್ರಾಯಕ್ಕೆ ಮನ್ನಣೆ ಕೊಡಿ. ಅದರಿಂದ ವಿವಾದ ಅಂತ್ಯ. ವೃತ್ತಿಯಲ್ಲಿ ಹಿರಿಯರ ಸಹಕಾರ. ಆರ್ಥಿಕ ಒತ್ತಡ ಅಂತ್ಯ.
ಸಿಂಹ
ಆರ್ಥಿಕ ಪರಿಸ್ಥಿತಿ ಸುಧಾರಣೆ. ಕಾಡುತ್ತಿದ್ದ ಚಿಂತೆ ಪರಿಹಾರದ ಲಕ್ಷಣ ತೋರಿಬರುತ್ತಿದೆ. ಕೋಪತಾಪ ನಿಯಂತ್ರಿಸಿ. ಸಮಾಧಾನಚಿತ್ತರಾಗಿರಿ.
ಕನ್ಯಾ
ಗ್ರಹಗತಿ ಪೂರಕ. ಸಂಬಂಧದಲ್ಲಿ ಸುಧಾರಣೆ. ಮಾನಸಿಕ ನಿರಾಳತೆ. ಹಣದ ಬಿಕ್ಕಟ್ಟು ಪರಿಹಾರ. ಹಳೆಯ ಸ್ನೇಹಿತರ ಭೇಟಿ. ಇಷ್ಟದ ವಸ್ತು ಖರೀದಿ.
ತುಲಾ
ನಿಮ್ಮ ಸುತ್ತಲಿನ ಬದಲಾವಣೆಗೆ ಒಗ್ಗಿಕೊಳ್ಳಿ. ದೂರವಾಗಿ ನಿಲ್ಲಬೇಡಿ. ಸಣ್ಣ ವಿಷಯಕ್ಕೆ ಅಸಹನೆಯಿಂದ ರೇಗದಿರಿ. ಶಾಂತಚಿತ್ತತೆ ಮುಖ್ಯ.
ವೃಶ್ಚಿಕ
ಉತ್ಸಾಹದ ದಿನ. ಕಾರ್ಯ ಸಂಪೂರ್ಣ. ಭಿನ್ನಮತ ನಿವಾರಣೆ. ಜಡತ್ವ ಬಿಟ್ಟು ಕೆಲಸ ಮಾಡಿ. ಆರೋಗ್ಯ ಸಮಸ್ಯೆ ಪರಿಹಾರದಿಂದ ನೆಮ್ಮದಿ.
ಧನು
ನಿಮ್ಮ ತಪ್ಪಿಗೆ ಇತರರ ಮೇಲೆ ದೂರು ಹಾಕಬೇಡಿ. ನಿಮ್ಮ ಸಮಸ್ಯೆ ನೀವು ಭಾವಿಸಿದಷ್ಟು ಕಠಿಣವಾಗಿಲ್ಲ. ಪರಿಹಾರ ಸಾಧ್ಯವಿದೆ.
ಮಕರ
ಮನೆಯವರ ಜತೆ ಪ್ರೀತಿಯಿಂದ ನಡಕೊಳ್ಳಿ. ಅಧಿಕಾರ ಚಲಾವಣೆ ಒಳಿತು ತರದು. ಮುನಿಸು ನಿವಾರಣೆಗೆ ಗಮನ ಕೊಡಿ. ವೆಚ್ಚ ಅಧಿಕ.
ಕುಂಭ
ನಿಮ್ಮ ಅಸಹನೆಗೆ ಇತರರ ಮೇಲೆ ರೇಗುವಿರಿ. ಸಂಘರ್ಷದ ಮನೋಭಾವ ಬಿಡಿ. ಇತರರ ಮನಸ್ಥಿತಿ ಅರಿತು ವ್ಯವಹರಿಸಿ.
ಮೀನ
ಅಶಾಂತ ಮನಸ್ಸು. ನಿಮ್ಮ ಚಿಂತನೆಗಳು ಕಾರ್ಯರೂಪಕ್ಕೆ ಬರದಿರುವ ಚಿಂತೆ. ಅಧ್ಯಾತ್ಮ, ಧ್ಯಾನ ನಿಮಗೆ ಸಹಕಾರಿಯಾದೀತು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !