May 30, 2026
Saturday, May 30, 2026
spot_img

ದಿನಭವಿಷ್ಯ: ಸ್ವಂತ ಉದ್ಯೋಗಿಗಳಿಗೆ ಇಂದು ಒಳ್ಳೆ ದಿನ, ರಿಸ್ಕ್ ಇರುವ ಕ್ಷೇತ್ರದಲ್ಲಿ ಹಣ ಹೂಡಬೇಡಿ

ಮೇಷ
ಕೆಲಸದ ಒತ್ತಡ ಹೆಚ್ಚಾದರೂ ನಿಮ್ಮ ಉತ್ಸಾಹಕ್ಕೆ ಕೊರತೆಯಿಲ್ಲ. ವೃತ್ತಿಯಲ್ಲಿ ಪೂರಕ ಬೆಳವಣಿಗೆ. ಕೌಟುಂಬಿಕ ಹೊಣೆ ಅಧಿಕ.
ವೃಷಭ
ಕೆಲಸದಲ್ಲಿ ಸಂಕಷ್ಟ. ಆದರೆ ಖಾಸಗಿ ಬದುಕಿಗೆ ತೊಂದರೆ ಉಂಟಾಗದು. ಕುರುಡಾಗಿ ಅನ್ಯರನ್ನು ಅನುಕರಿಸಬೇಡಿ. ಸ್ವಂತಿಕೆಗೆ ಗಮನ ಕೊಡಿ.
ಮಿಥುನ
ವೃತ್ತಿಯಲ್ಲಿ ಹೆಚ್ಚುವರಿ ಹೊಣೆ. ಆಸ್ತಿಪಾಸ್ತಿ ಖರೀದಿಗೆ ಯೋಚಿಸಿದ್ದರೆ ಅನುಕೂಲ ಸಮಯ. ಬಂಧುಗಳ ಸಹಕಾರ. ಹೊಟ್ಟೆ ನೋವು ಕಾಡೀತು.
ಕಟಕ
ವೃತ್ತಿಯಲ್ಲಿ ಎಲ್ಲವೂ ಸಲೀಸು. ಆದರೆ ಮನೆಯಲ್ಲಿ ಅಭಿಪ್ರಾಯ ಭೇದ, ವಾಗ್ವಾದ ಸಂಭವ. ಮುಖ್ಯ ವಿಷಯದಲ್ಲಿ ಇಬ್ಬಂದಿತನ ಕಾಡಲಿದೆ.
ಸಿಂಹ
ಧಾರ್ಮಿಕ ಕ್ಷೇತ್ರದಲ್ಲಿ ಸಕ್ರಿಯರಾಗುವ ಅವಕಾಶ. ಸ್ವಂತ ಉದ್ಯೋಗಿಗಳಿಗೆ ಯಶಸ್ಸು. ಆರೋಗ್ಯ ಸಮಸ್ಯೆ ಶಮನ. ಸಾಂಸಾರಿಕ ಸೌಹಾರ್ದ.
ಕನ್ಯಾ
ಪ್ರಮುಖ ವ್ಯಕ್ತಿಯ ಸಂಪರ್ಕ ಸಾಧಿಸುವಿರಿ. ನಿಮ್ಮ ಕಾರ್ಯಕ್ಕೆ ನೆರವು ದೊರಕಲಿದೆ. ದೈಹಿಕ ನೋವು ಇದ್ದರೆ ಇಂದು ಶಮನವಾಗಲಿದೆ.
ತುಲಾ
ಹಣದ ವಿಚಾರದಲ್ಲಿ ಎಚ್ಚರದ ಹೆಜ್ಜೆಯಿಡಿ. ರಿಸ್ಕ್ ಇರುವ ಕ್ಷೇತ್ರದಲ್ಲಿ ಹಣ ಹೂಡಬೇಡಿ. ಕೆಲವರ ಟೀಕೆ ಎದುರಿಸುವಿರಿ. ಕುಟುಂಬಸ್ಥರ ಬೆಂಬಲ.
ವೃಶ್ಚಿಕ
ನಿಮ್ಮ ಕ್ರಿಯಾಶೀಲತೆ ಎಲ್ಲರ ಗಮನವನ್ನು ಸೆಳೆಯಲಿದೆ. ವೃತ್ತಿ ಕ್ಷೇತ್ರದಲ್ಲಿ ವಾಗ್ವಾದಕ್ಕೆ ಆಸ್ಪದ ನೀಡದಿರಿ. ಆರೋಗ್ಯ ಸುಸ್ಥಿರ.
ಧನು
ವೃತ್ತಿಯಲ್ಲಿ ಒತ್ತಡ. ಹಾಗಾಗಿ ಅಸಹನೆ ಹೆಚ್ಚು. ಉದ್ಯಮ ಕ್ಷೇತ್ರ ವಿಸ್ತಾರಕ್ಕೆ ಅವಕಾಶವಿದೆ. ಎಲ್ಲದರ ಮಧ್ಯೆ ಮನಶಾಂತಿಗೆ ತುಡಿಯುವಿರಿ.
ಮಕರ
ಕೆಲಸದಲ್ಲಿ ಅಡ್ಡಿ. ಮಾನಸಿಕ ಖಿನ್ನತೆ. ಇತರರ ವಿಶ್ವಾಸದ ಕೊರತೆ. ದಂಪತಿ ಮಧ್ಯೆ ವಾಗ್ವಾದ ನಡೆದೀತು. ಹಣಕಾಸು ಪರಿಸ್ಥಿತಿ ಕ್ಲಿಷ್ಟಕರ.
ಕುಂಭ
ದೀರ್ಘಕಾಲದ ಬಳಿಕ ಆರ್ಥಿಕ ದೃಢತೆ. ಹೂಡಿಕೆಯಿಂದ ಲಾಭ. ಇತರರು ಹೇಳುವುದನ್ನು ಬೇಗ ನಂಬುತ್ತೀರಿ. ಪರಾಮರ್ಶೆ ಒಳಿತು.
ಮೀನ
ಫಲಪ್ರದ ದಿನ. ಆದರೂ ದಿನವಿಡೀ ಒತ್ತಡ. ವಿರಾಮದ ಅವಧಿಯಲ್ಲಿ ಪ್ರೀತಿಪಾತ್ರರ ಸಂಗದಲ್ಲಿ ಸಂಭ್ರಮಿಸುವ ಅವಕಾಶ. ಖರ್ಚು ಹೆಚ್ಚಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !