April 30, 2026
Thursday, April 30, 2026
spot_img

ದಿನಭವಿಷ್ಯ: ಇಂದು ನಿಮ್ಮ ಆದಾಯ ಹೆಚ್ಚಾಗುತ್ತೆ, ಜಾಸ್ತಿ ಎಮೋಷನಲ್ ಆಗ್ಬೇಡಿ

ಮೇಷ
ವೃತ್ತಿಯಲ್ಲಿ ವಿಘ್ನ ತಲೆದೋರಿದರೂ ಹೆಚ್ಚಿನ ಹಾನಿ ತರದು. ಆಪ್ತರ ಸೂಕ್ತ ಸಹಕಾರ ಸಿಗಲಿದೆ. ಖರ್ಚು ನಿಮ್ಮ ಮಿತಿಯೊಳಗಿರಲಿ.
ವೃಷಭ
ವೃತ್ತಿಯಲ್ಲಿ ಪ್ರಗತಿ. ಬಾಕಿ ಉಳಿದ ಕಾರ್ಯ ಪೂರ್ಣ. ಪ್ರೀತಿಯಲ್ಲೂ ಸಂತೋಷದ ಬೆಳವಣಿಗೆ. ವಿವಾಹ ಸಂಬಂಧ ಕೂಡಿಬರಬಹುದು.
ಮಿಥುನ
ನಿಮ್ಮ ಉತ್ತಮ ನಿರ್ವಹಣೆಗೆ ಸೂಕ್ತ ಪ್ರತಿಫಲ ಸಿಗಲಿದೆ. ಸಂತಾನ ಅಪೇಕ್ಷಿತರಿಗೆ ಶುಭಪ್ರದ ಬೆಳವಣಿಗೆ. ಆದಾಯ ಹೆಚ್ಚಳ.
ಕಟಕ
ಸಣ್ಣ ವಿಷಯ ಹೆಚ್ಚು ಜಟಿಲಗೊಳಿಸಬೇಡಿ. ಸಂತೋಷ ಪಡಲು ನಿಮ್ಮ ಮನಸ್ಥಿತಿ ಬದಲಿಸುವುದೂ ಅಗತ್ಯ. ವೃತ್ತಿಯಲ್ಲಿ ಅಧಿಕ ಹೊಣೆಗಾರಿಕೆ.
ಸಿಂಹ
ದಿನವಿಡೀ ಉತ್ಸಾಹ. ಹೊಣೆಗಾರಿಕೆ ಮುಗಿದು ನಿರಾಳತೆಯ ಭಾವ. ಬಯಸಿದ ಗುರಿ ಸಾಧಿಸುವಿರಿ. ಆದಾಯದಲ್ಲಿ ಹೆಚ್ಚಳ
ಕನ್ಯಾ
ವೃತ್ತಿ ಒತ್ತಡ ಅಧಿಕವಿದ್ದರೂ ಕುಟುಂಬದ ಸಂಗಡ ಆತ್ಮೀಯ ಕಾಲ ಕಳೆಯುವ ಅವಕಾಶವೂ ಸಿಗಲಿದೆ. ಆರ್ಥಿಕ ಒತ್ತಡ.
ತುಲಾ
ಆದಾಯದಲ್ಲಿ ಹೆಚ್ಚಳ. ಆಪ್ತರ ಜತೆಗಿನ ಭಿನ್ನಮತ ಸುಗಮ ಪರಿಹಾರ. ಕಠಿಣ ಕಾರ್ಯ ಇಂದು ಕೈಗೆತ್ತಿಕೊಳ್ಳಬೇಡಿ. ಕಾದುನೋಡಿರಿ.
ವೃಶ್ಚಿಕ
ಯಾರದೋ ಮಾತು ಮನಸ್ಸು ಕೆಡಿಸಬಹುದು. ಅಂತಹ ಮಾತಿಗೆ ಆಸ್ಪದ ಕೊಡದಂತೆ ವರ್ತಿಸಿರಿ. ದೌರ್ಬಲ್ಯಕ್ಕೆ ಸುಲಭ ಬಲಿಯಾಗಬೇಡಿ.
ಧನು
ನೀವು ಹಿಂದೆ ತೋರಿದ ಧೋರಣೆಗೆ ಕೆಲವರ ಅತೃಪ್ತಿ, ಟೀಕೆ. ಬಳಿಕ ಸರಿಯಾಗಲಿದೆ. ಆತ್ಮೀಯರ ಸಂಗದಲ್ಲಿ ನಿರಾಳತೆ.
ಮಕರ
ಮನೆ ವ್ಯವಹಾರಕ್ಕೆ ಸಂಬಂಧಿಸಿ ಮಹತ್ವದ ನಿರ್ಧಾರ ತಾಳಬೇಕಾದೀತು. ಆರ್ಥಿಕ ಪ್ರಗತಿ. ಅನಾರೋಗ್ಯ ನಿವಾರಣೆ. ಧನಪ್ರಾಪ್ತಿ.
ಕುಂಭ
ನೀವು ಅಚ್ಚರಿಪಡುವ ಬೆಳವಣಿಗೆ ಉಂಟಾದೀತು. ವೃತ್ತಿಯಲ್ಲಿ ಕಿರುಕುಳ ಎದುರಿಸುವಿರಿ. ಕುಟುಂಬ ಸಂಬಂಧ ಬಲಗೊಳಿಸಿ. ಭಾವುಕತೆ ನಿಯಂತ್ರಿಸಿ.
ಮೀನ
ಚಿಂತೆ ತಂದಿದ್ದ ವಿಷಯ ಇತ್ಯರ್ಥ. ಆತ್ಮವಿಶ್ವಾಸ ಹೆಚ್ಚಿಸುವ ಪ್ರಸಂಗ. ಆರ್ಥಿಕ ವ್ಯವಹಾರದಲ್ಲಿ ಲಾಭ. ಕೌಟುಂಬಿಕ ಸೌಹಾರ್ದ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !