July 2, 2026
Thursday, July 2, 2026
spot_img

ದಿನಭವಿಷ್ಯ: ವ್ಯವಹಾರದಲ್ಲಿ ಎಚ್ಚರವಿರಲಿ, ಕೋಪ ನಿಯಂತ್ರಿಸದಿದ್ದರೆ ಹಾನಿ ಗ್ಯಾರಂಟಿ

ಮೇಷ
ಎಲ್ಲ ವ್ಯವಹಾರದಲ್ಲಿ ಎಚ್ಚರ ಅವಶ್ಯ. ಜಡತ್ವ ಬಿಟ್ಟು ಕಾರ್ಯವೆಸಗಿ. ಕೋಪದ ವರ್ತನೆ ಹಾನಿ ತಂದೀತು. ಆರೋಗ್ಯ ಸಮಸ್ಯೆ ಪರಿಹಾರ.
ವೃಷಭ
ವೃತ್ತಿಕ್ಷೇತ್ರದಲ್ಲಿ ಉನ್ನತಿಯ ಅವಕಾಶ. ಅನಿರೀಕ್ಷಿತ ಬದಲಾವಣೆ. ಅದಕ್ಕೆ ಒಗ್ಗಿಕೊಳ್ಳಿ. ಸಂಗಾತಿ ಜತೆಗೆ ಉತ್ತಮ ಹೊಂದಾಣಿಕೆ.
ಮಿಥುನ
ಕೆಲದಿನಗಳ ಗೊಂದಲ ಪರಿಹಾರ. ಎಲ್ಲವೂ ನಿಚ್ಚಳ. ನಿಮ್ಮ ಕಾರ್ಯ ಸಲೀಸು. ಸಂತಾನಾಪೇಕ್ಷಿ ದಂಪತಿಗೆ ಶುಭ ಬೆಳವಣಿಗೆ.
ಕಟಕ
ವ್ಯವಹಾರ ಪ್ರಗತಿ. ಆರ್ಥಿಕ ಅಡಚಣೆ ನಿವಾರಣೆ. ಸಂಗಾತಿ ಜತೆ ಸೌಹಾರ್ದ ಪರಿಸರ. ಮನಸ್ತಾಪ ಅಂತ್ಯ. ದೈಹಿಕ ನೋವು ಪರಿಹಾರ.
ಸಿಂಹ
ಪ್ರಗತಿಗೆ ತೊಡಕು. ಸಮಾಧಾನದ ಹೆಜ್ಜೆ ಇಡಿ. ಧಾವಂತ ಬೇಡ. ನಿಷಲ ಮಾತುಕತೆ ತ್ಯಜಿಸಿ. ಶೇರು ಹೂಡಿಕೆಯಿಂದ ಸ್ವಲ್ಪ ಕಾಲ ದೂರವಿರಿ.
ಕನ್ಯಾ
ದಿನವಿಡೀ ಕಾರ್ಯ. ವಿರಾಮಕ್ಕೆ ಸಮಯ ಸಿಗದು. ಆದರೆ ತೃಪ್ತಿಕರ ಫಲಿತಾಂಶ. ಅನ್ಯರ ಮನವೊಲಿಕೆ ಕಾರ್ಯ ಸಫಲ. ಧನ ಪ್ರಾಪ್ತಿ.
ತುಲಾ
ಉದ್ದೇಶಿತ ಫಲ ದೊರಕದೆ ನಿರಾಶೆ. ಕೆಲ ವಿಷಯದಲ್ಲಿ ರಾಜಿ ಮಾಡಿಕೊಳ್ಳಬೇಕು. ವೃತ್ತಿ ಒತ್ತಡದಿಂದ ಹೊರಬಂದು ಆಪ್ತರ ಜತೆ ಕಳೆಯಿರಿ.
ವೃಶ್ಚಿಕ
ಸಕಾಲದಲ್ಲಿ ನಿಮ್ಮ ಕಾರ್ಯ ಪೂರೈಕೆ. ಮನೆಯಲ್ಲಿ ಸಮರಸದ ವಾತಾವರಣ. ಆರ್ಥಿಕ ಪರಿಸ್ಥಿತಿ ಆಶಾದಾಯಕ. ಒಟ್ಟಿನಲ್ಲಿ ಪೂರಕ ದಿನ.
ಧನು
ಬದುಕಲ್ಲಿ ಮಹತ್ವದ ಬದಲಾವಣೆ ಆದೀತು. ಸಂಬಂಧ ವೃದ್ಧಿ. ಉದ್ಯಮದಲ್ಲಿ ಪ್ರಗತಿ. ಆರೋಗ್ಯ ಸಮಸ್ಯೆ ನಿವಾರಣೆ. ನಿರಾಳತೆ.
ಮಕರ
ದಿನವಿಡೀ ಕಾರ್ಯವ್ಯಸ್ತ. ಕೆಲವು ಬಗೆಯ ಒತ್ತಡ. ಆಪ್ತರ ಜತೆ ವಾಗ್ವಾದವೂ ನಡೆದೀತು. ಖರ್ಚು ಕಡಿಮೆ ಮಾಡಲೆತ್ನಿಸಿ.
ಕುಂಭ
ಎಂದಿನಂತೆ ಸಹಜ ದಿನ. ಮಹತ್ವದ ಬೆಳವಣಿಗೆ ಕಾಣದು. ಆಪ್ತರ ಜತೆಗಿನ ಭಿನ್ನಮತ ಪರಿಹಾರ. ವೃತ್ತಿ ಸಮಸ್ಯೆಯೊಂದು ಇತ್ಯರ್ಥ ಕಾಣಲಿದೆ.
ಮೀನ
ಧನಹಾನಿ ಉಂಟಾದೀತು. ಇದರಿಂದ ನೆಮ್ಮದಿ ಹಾಳಾದೀತು. ಕಿವಿನೋವು ಸಂಭವ. ಮನಶ್ಯಾಂತಿ ಸಾಧಿಸಲು ಧ್ಯಾನದಲ್ಲಿ ತೊಡಗಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !