August 24, 2026
Monday, August 24, 2026
spot_img

ದಿನಭವಿಷ್ಯ: ಊಹಾಪೋಹಕ್ಕೆ ತಲೆಕೆಡಿಸಿಕೊಳ್ಳಬೇಡಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ

ಮೇಷ
ಮಾಮೂಲಾಗಿ ದಿನ ಆರಂಭಗೊಂಡರೂ ಬಳಿಕ ಮಹತ್ವದ ಬೆಳವಣಿಗೆ ಉಂಟಾದೀತು. ಸಮಾರಂಭದಲ್ಲಿ ಭಾಗಿ. ಬಂಧುಮಿತ್ರರ ಭೇಟಿ.
ವೃಷಭ
ಜವಾಬ್ದಾರಿ ಹೆಚ್ಚಳ. ಇಷ್ಟವಿಲ್ಲದಿದ್ದರೂ ಕೆಲಸ ಮಾಡಲೇ ಬೇಕು. ಆತ್ಮೀಯರ ಜತೆ ಭಾವನೆ ಹಂಚಿಕೊಳ್ಳಲು ಬಯಸುವಿರಿ.
ಮಿಥುನ
ನಿಮಗೆ ಸಂಬಂಧಿಸಿ ಮುಖ್ಯ ಬೆಳವಣಿಗೆ ಸಂಭವಿಸಬಹುದು. ಆ ಬಗ್ಗೆ ಎಚ್ಚರದಿಂದಿರಿ. ಆರೋಗ್ಯ ಕಾಳಜಿ ವಹಿಸಿ. ಕೌಟುಂಬಿಕ ಸಹಕಾರ.
ಕಟಕ
ಆಪ್ತರ ಭೇಟಿಯು ನಿಮ್ಮ ದಿನದ ಸಂತೋಷ ಹೆಚ್ಚಿಸಲಿದೆ. ಆರ್ಥಿಕ ಅಭಿವೃದ್ಧಿ. ನಿಮ್ಮ ಕಾರ್ಯದಲ್ಲಿ ತೃಪ್ತಿಕರ ಫಲಿತಾಂಶ ಕಾಣುವಿರಿ.
ಸಿಂಹ
ವೃತ್ತಿಯಲ್ಲಿ ಒತ್ತಡ. ಸಹನೆಯ ವರ್ತನೆ ಮುಖ್ಯ. ಆರ್ಥಿಕ ಲಾಭ. ಆರೋಗ್ಯ ಸಮಸ್ಯೆ ಕಾಡಬಹುದು. ಮಿತಾಹಾರ ಒಳಿತು.
ಕನ್ಯಾ
ಒತ್ತಡ ತುಂಬಿದ ದಿನ. ಕಾಲಮಿತಿಯಲ್ಲಿ ಕೆಲಸ ಪೂರೈಸಬೇಕು. ಆಪ್ತರ ಜತೆಗಿನ ಭಿನ್ನಮತ ನಿವಾರಿಸಿಕೊಳ್ಳಿ. ದೈಹಿಕ ಆಲಸ್ಯ ಕಾಡಬಹುದು.
ತುಲಾ
ತೃಪ್ತಿ ತರುವ ದಿನ. ಅದಕ್ಕೆ ಕಾರಣ ನಿಮ್ಮ ಮುಖ್ಯ ಉದ್ದೇಶ ಸಾಧನೆ. ಆರ್ಥಿಕ ಅಭಿವೃದ್ಧಿ. ವಿರೋಧಿಗಳು ಮೌನ. ಆಪ್ತರಿಂದ ಸಹಕಾರ.
ವೃಶ್ಚಿಕ
ಸಣ್ಣ ವಿಷಯ ಕೆಲವೊಮ್ಮೆ ಕಡೆಗಣಿಸ ಬಾರದು. ಗಂಭೀರ ಪರಿಣಾಮ ಸಂಭವ. ಭಾವನಾತ್ಮಕ ಏರುಪೇರು ಅನುಭವಿಸುವಿರಿ.
ಧನು
ನಿಮ್ಮ ಸತತ ಪ್ರಯತ್ನದಿಂದ ಉದ್ದೇಶ ಸಾಧನೆ. ಧನ ಪ್ರಾಪ್ತಿ. ಅನಿರೀಕ್ಷಿತ ಲಾಭ ಖುಷಿ ತರಲಿದೆ. ಕೌಟುಂಬಿಕ ಅಸಹಕಾರ ನಿವಾರಣೆ.
ಮಕರ
ಊಹಾಪೋಹಕ್ಕೆ ಬೆಲೆ ಕೊಡಬೇಡಿ. ವಸ್ತುಸ್ಥಿತಿ ಅರಿತು ವ್ಯವಹರಿಸಿ. ಕೆಲವರ ವಿರೋಧ ಬೇಡ. ಹೊಂದಿಕೊಂಡು ಬಾಳಿ.
ಕುಂಭ
ಸವಾಲಿನ ದಿನ. ಏಳು-ಬೀಳು ಎರಡನ್ನೂ ಎದುರಿಸುವಿರಿ. ಆಪ್ತರ ಜತೆ ಭಾವನೆ ಹಂಚಿಕೊಂಡು ಸಮಾಧಾನ ಪಡೆಯುವಿರಿ.
ಮೀನ
ಎಲ್ಲರ ದೃಷ್ಟಿ ನಿಮ್ಮ ಮೇಲೆ. ನಿಮ್ಮ ಸೋಲನ್ನೆ ಕೆಲವರು ಬಯಸುವರು. ಅವರಿಗೆ ಅಂತಹ ಸಂತೋಷ ನೀಡಬೇಡಿ. ಸಂಬಂಧದಲ್ಲಿ ಒಡಕು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !