ಹೊಸದಿಗಂತ ಟಿಜಿಟಲ್ ಡೆಸ್ಕ್:
ನಟಿ ಮೃಣಾಲ್ ಠಾಕೂರ್ ಹಾಗೂ ಟೀಮ್ ಇಂಡಿಯಾದ ಯುವ ಕ್ರಿಕೆಟಿಗ ಯಶಸ್ವಿ ಜೈಸ್ವಾಲ್ ನಡುವೆ ಪ್ರೇಮಾಂಕುರವಾಗಿದೆ ಎಂಬ ಗಾಸಿಪ್‌ಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದವು. ಆದರೆ ಈ ಸುದ್ದಿಗೆ ಸ್ವತಃ ಮೃಣಾಲ್ ಠಾಕೂರ್ ಅವರೇ ಕಮೆಂಟ್ ಬಾಕ್ಸ್‌ನಲ್ಲೇ ಖಡಕ್ ಆಗಿ ಉತ್ತರ ನೀಡುವ ಮೂಲಕ ಇಂತಹ ಸುಳ್ಳು ಸುದ್ದಿ ಹರಡುವವರ ಬಾಯಿ ಮುಚ್ಚಿಸಿದ್ದಾರೆ.
ಏನಿದು ಘಟನೆ?
ಕೆಲ ದಿನಗಳ ಹಿಂದೆ ಮೃಣಾಲ್ ಠಾಕೂರ್ ಮತ್ತು ಯಶಸ್ವಿ ಜೈಸ್ವಾಲ್ ಒಂದೇ ದಿನ, ಒಂದೇ ರೆಸ್ಟೋರೆಂಟ್‌ಗೆ ಭೇಟಿ ನೀಡಿದ್ದರು. ಇದನ್ನು ಗಮನಿಸಿದ ಕೆಲವು ಸೋಶಿಯಲ್ ಮೀಡಿಯಾ ಪೇಜ್‌ಗಳು, ಇವರಿಬ್ಬರೂ ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದವು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ‘ಇನ್‌ಸ್ಟಂಟ್ ಬಾಲಿವುಡ್’ ಎಂಬ ಇನ್‌ಸ್ಟಾಗ್ರಾಮ್ ಪೇಜ್ ಹಂಚಿಕೊಂಡಿದ್ದ ವಿಡಿಯೋಗೆ ಮೃಣಾಲ್ ನೇರವಾಗಿಯೇ ಕಮೆಂಟ್ ಮಾಡಿದ್ದಾರೆ.
‘ಬ್ರೋ ರಿಲ್ಯಾಕ್ಸ್..’ ಎಂದ ನಟಿ:
ವದಂತಿ ಹಬ್ಬಿಸಿದ ವಿಡಿಯೋಗೆ ಕಮೆಂಟ್ ಮಾಡಿದ್ದ ಮೃಣಾಲ್, “ಬ್ರೋ ರಿಲ್ಯಾಕ್ಸ್.. ನಾವು ಒಟ್ಟಿಗೆ ಇರೋದನ್ನ ತೋರಿಸಿ ಮೊದಲು. ನೀವು ಇಷ್ಟು ಓದಿದವರಾಗಿ ಇಂತಹ ಸುದ್ದಿಗಳನ್ನ ಹೇಗೆ ನಂಬುತ್ತೀರಿ? ದೇಶದಲ್ಲಿ ಧ್ವನಿ ಎತ್ತಬೇಕಾದ ಎಷ್ಟೋ ಗಂಭೀರ ವಿಚಾರಗಳು ನಡೆಯುತ್ತಿವೆ. ಯುವಜನತೆಯಿಂದ ಏನನ್ನಾದರೂ ಕಲಿಯಿರಿ ಮತ್ತು ಮುಖ್ಯವಾದ ವಿಷಯಗಳ ಬಗ್ಗೆ ಮಾತನಾಡಿ. ಆಗ ನಿಮಗೆ ಇನ್ನು ಹೆಚ್ಚಿನ ವ್ಯೂಸ್ ಸಿಗುತ್ತದೆ” ಎಂದು ಬರೆದು ತರಾಟೆಗೆ ತೆಗೆದುಕೊಂಡಿದ್ದಾರೆ. ಮೃಣಾಲ್ ಈ ಕಮೆಂಟ್ ಅನ್ನು ತಕ್ಷಣವೇ ಡಿಲೀಟ್ ಮಾಡಿದ್ದರೂ, ಅದರ ಸ್ಕ್ರೀನ್‌ಶಾಟ್‌ಗಳು ಈಗ ಇಂಟರ್ನೆಟ್‌ನಲ್ಲಿ ಭಾರಿ ವೈರಲ್ ಆಗಿವೆ.
ಇದನ್ನೂ ಓದಿ:
ವದಂತಿಗಳಲ್ಲಿ ಸಿಲುಕುತ್ತಿರುವುದು ಇದೇ ಮೊದಲಲ್ಲ:
ಮೃಣಾಲ್ ಠಾಕೂರ್ ಹೆಸರು ಇಂತಹ ಲಿಂಕ್-ಅಪ್ ವದಂತಿಗಳಲ್ಲಿ ಸಿಲುಕುತ್ತಿರುವುದು ಇದೇ ಮೊದಲೇನಲ್ಲ. ಕೆಲವು ತಿಂಗಳ ಹಿಂದೆ ತಮಿಳು ನಟ ಧನುಷ್ ಮತ್ತು ಮೃಣಾಲ್ ಡೇಟಿಂಗ್ ಮಾಡುತ್ತಿದ್ದಾರೆ ಹಾಗೂ ಇಬ್ಬರೂ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡಿತ್ತು. ಈ ಹಿಂದೆ ಮೃಣಾಲ್ ಅವರು ಬರಹಗಾರ ಶರದ್ ಚಂದ್ರ ತ್ರಿಪಾಠಿ ಅವರೊಂದಿಗೆ ಪ್ರೀತಿಯಲ್ಲಿದ್ದರು. ಆದರೆ 2015ರಲ್ಲಿ ಈ ಜೋಡಿ ಬೇರ್ಪಟ್ಟಿತ್ತು. ಅಂದಿನಿಂದ ಮೃಣಾಲ್ ಯಾವುದೇ ರಿಲೇಶನ್‌ಶಿಪ್‌ನಲ್ಲಿ ಇಲ್ಲದೆ ಕೇವಲ ತಮ್ಮ ಸಿನಿಮಾಗಳ ಕಡೆಗೆ ಮಾತ್ರ ಸಂಪೂರ್ಣ ಗಮನ ಹರಿಸುತ್ತಿದ್ದಾರೆ.



