September 28, 2026
Monday, September 28, 2026
spot_img

ಖಮೇನಿ ಪ್ರಾಣಕ್ಕೆ ಮುಳುವಾಯಿತೇ ಚೀನಾ ಸ್ನೇಹ? ಇಸ್ರೇಲ್ ದಾಳಿ ಪತ್ತೆ ಹಚ್ಚುವಲ್ಲಿ HQ-9B ಫೇಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್

ಇರಾನ್ ತನ್ನ ಕ್ಷಿಪಣಿ ಬಲದ ಬಗ್ಗೆ ಎಷ್ಟೇ ಹಾರಾಡಿದರೂ, ಶತ್ರುಗಳ ದಾಳಿಯನ್ನು ಹೊಡೆದುರುಳಿಸುವ ‘ವಾಯು ರಕ್ಷಣಾ ವ್ಯವಸ್ಥೆ’ಯಲ್ಲಿ ಸತತವಾಗಿ ಸೋಲುತ್ತಲೇ ಬಂದಿದೆ. ಈ ಹಿಂದೆ ರಷ್ಯಾದ S-300PMU-2 ವ್ಯವಸ್ಥೆ ಇದ್ದರೂ, 2025ರ ಜೂನ್‌ನಲ್ಲಿ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಅಣ್ವಸ್ತ್ರ ಕೇಂದ್ರಗಳ ಮೇಲಿನ ದಾಳಿಯನ್ನು ತಡೆಯಲು ಇರಾನ್ ವಿಫಲವಾಗಿತ್ತು.

ಈ ವೈಫಲ್ಯವನ್ನು ಮುಚ್ಚಿಕೊಳ್ಳಲು ಮತ್ತು ಅಮೆರಿಕ-ಇಸ್ರೇಲ್ ಯುದ್ಧ ವಿಮಾನಗಳನ್ನು ಪತ್ತೆಹಚ್ಚಲು ಇರಾನ್ ಇತ್ತೀಚೆಗೆ ಚೀನಾದಿಂದ ಅತ್ಯಾಧುನಿಕ ಎನ್ನಲಾದ HQ-9B ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸಿತ್ತು. ಆದರೆ, ಇತ್ತೀಚಿನ ದಾಳಿಯ ವೇಳೆ ಈ ವ್ಯವಸ್ಥೆಯು ಕನಿಷ್ಠ ಎಚ್ಚರಿಕೆಯನ್ನೂ ನೀಡದೆ ಸಂಪೂರ್ಣವಾಗಿ ವಿಫಲವಾಗಿದ್ದು, ಇರಾನ್ ಸರ್ವೋಚ್ಚ ನಾಯಕ ಖಮೇನಿ ಸೇರಿದಂತೆ ಉನ್ನತ ಕಮಾಂಡರ್‌ಗಳ ಬಲಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಚೀನಾ ಏರೋಸ್ಪೇಸ್ ಸೈನ್ಸ್ ಅಂಡ್ ಇಂಡಸ್ಟ್ರಿ ಕಾರ್ಪೊರೇಷನ್ 200 ಕಿಮೀ ವ್ಯಾಪ್ತಿಯಲ್ಲಿ ಶತ್ರು ವಿಮಾನ, ಬಾಂಬರ್ ಹಾಗೂ ಕ್ಷಿಪಣಿಗಳನ್ನು ಪತ್ತೆಹಚ್ಚುವ ಸಾಮರ್ಥ್ಯ ಹೊಂದಿದೆ ಎಂದು ಚೀನಾ ಹೇಳಿಕೊಂಡಿತ್ತು.

ಚೀನಾ ಇದನ್ನು ತನ್ನ ಬೀಜಿಂಗ್ ಮತ್ತು ಟಿಬೆಟ್ ಗಡಿಗಳಲ್ಲಿ ನಿಯೋಜಿಸಿದೆ. ಇದೇ ನಂಬಿಕೆಯ ಮೇಲೆ ಇರಾನ್ ಇದನ್ನು ಖರೀದಿಸಿತ್ತು.

ಆದರೆ, ಯುದ್ಧದ ಸಂಕಷ್ಟದ ಸಮಯದಲ್ಲಿ ಇಸ್ರೇಲ್ ಮತ್ತು ಅಮೆರಿಕದ ತಂತ್ರಜ್ಞಾನದ ಮುಂದೆ ಚೀನಾದ ಈ ‘ರಕ್ಷಣಾ ಕವಚ’ ಕೇವಲ ಆಟಿಕೆಯಂತಾಗಿರುವುದು ಈಗ ಜಗಜ್ಜಾಹೀರಾಗಿದೆ.

Must Read