September 1, 2026
Tuesday, September 1, 2026
spot_img

5 ತಿಂಗಳಿಗೇ ಮುಗಿಯಿತಾ ದಾಂಪತ್ಯ ಪಯಣ? ಇನ್‌ಸ್ಟಾಗ್ರಾಮ್‌ನಲ್ಲಿ ಡಿವೋರ್ಸ್ ಸುದ್ದಿ ಹೊರಹಾಕಿದ ರ‍್ಯಾಪರ್

ಹೊಸದಿಗಂತ ಡಿಜಿಟಲ್ಡೆಸ್ಕ್ :

ಬಾಲಿವುಡ್ ಅಂದ್ಮೇಲೆ ಅಲ್ಲಿ ಪ್ರೀತಿ, ಮದುವೆ, ಡಿವೋರ್ಸ್ ಎಲ್ಲಾ ತೀರಾ ಕಾಮನ್ ಬಿಡಿ. ಆದರೆ, ಈಗ ಕೇಳಿಬಂದಿರೋ ಒಂದು ಸುದ್ದಿ ಮಾತ್ರ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದೆ. ಖ್ಯಾತ ರ‍್ಯಾಪರ್ ಹಾಗೂ ಸಿಂಗರ್ ಬಾದ್‌ಶಾ ಮತ್ತೆ ಪತ್ನಿ ಇಶಾ ರಿಖಿ ಮದುವೆಯಾದ ಕೇವಲ 5 ತಿಂಗಳಿಗೇ ಸಪರೇಟ್ ಆಗೋ ನಿರ್ಧಾರ ತಗೊಂಡಿದ್ದಾರೆ. ಇಬ್ಬರೂ ಪರಸ್ಪರ ಒಪ್ಪಂದದ ಮೂಲಕವೇ ಬೇರೆಯಾಗಲು ನಿರ್ಧರಿಸಿದ್ದು, ಈ ವಿಷಯವನ್ನು ಸ್ವತಃ ಬಾದ್‌ಶಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಖಚಿತಪಡಿಸಿದ್ದಾರೆ.

“ನಾನು ಮತ್ತು ಇಶಾ ಪರಸ್ಪರ ಮಾತನಾಡಿ, ಗೌರವಯುತವಾಗಿಯೇ ನಮಗನುಕೂಲವಾಗುವ ಬೇರೆ ಬೇರೆ ದಾರಿಗಳನ್ನು ಕಂಡುಕೊಳ್ಳಲು ನಿರ್ಧರಿಸಿದ್ದೇವೆ. ಈ ಸಮಯದಲ್ಲಿ ನಮ್ಮ ಪ್ರೈವಸಿಗೆ ಪ್ರತಿಯೊಬ್ಬರೂ ಗೌರವ ಕೊಡಬೇಕು ಅಂತ ಕೇಳಿಕೊಳ್ಳುತ್ತಿದ್ದೇವೆ. ಈ ವಿಷಯದಲ್ಲಿ ಇದುವೇ ನಮ್ಮ ಕೊನೆಯ ಮಾತು. ದಯವಿಟ್ಟು ಯಾರೂ ನಮ್ಮ ಸಂಬಂಧದ ಬಗ್ಗೆ ಇಲ್ಲಸಲ್ಲದ ವದಂತಿಗಳನ್ನು ಹಬ್ಬಿಸಬೇಡಿ” ಎಂದು ಬಾದ್‌ಶಾ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಆದರೆ, ಈ ಡಿವೋರ್ಸ್ ಸುದ್ದಿ ಹೊರಬೀಳುವುದಕ್ಕಿಂತ ಕೆಲವೇ ವಾರಗಳ ಮುಂಚೆ ಇಶಾ ಪೋಸ್ಟ್ ಒಂದನ್ನ ಹಂಚಿಕೊಂಡಿದ್ದರು, “ಕೆಲವು ಹೋರಾಟಗಳು ಹೊರಗಡೆ ಕಣ್ಣಿಗೆ ಕಾಣಿಸುವುದಿಲ್ಲ. ಎದುರಿದ್ದವರ ಪವರ್, ಪ್ರಭಾವ ನೋಡಿ ಹೆದರಿ ನಾನು ಇಷ್ಟು ದಿನ ಸುಮ್ಮನಿದ್ದೆ. ಹಾಗಂತ ನನ್ನ ಮೌನವೇ ಸಮ್ಮತಿಯಲ್ಲ, ಅದು ನನ್ನ ಉಸಿರು ಉಳಿಸಿಕೊಳ್ಳಲು ಮಾಡಿದ ಸಾಹಸ. ಈಗ ನಾನು ಧೈರ್ಯವಾಗಿ ಹೊರಬರುತ್ತಿದ್ದೇನೆ” ಎಂದು ಇಶಾ ಬರೆದುಕೊಂಡಿದ್ದು ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು.

ಇಶಾ ಈ ಹಿಂದೆ ಇನ್‌ಸ್ಟಾಗ್ರಾಮ್ Q&A ಸೆಷನ್‌ನಲ್ಲಿ ತಮಗೂ ಬಾದ್‌ಶಾಗೂ ಮದುವೆಯಾಗಿದೆ ಎಂದು ಒಪ್ಪಿಕೊಂಡಿದ್ದರು. ಆಮೇಲೆ ಬಾದ್‌ಶಾ ಕೂಡ ಇದನ್ನು ಖಚಿತಪಡಿಸಿದ್ದರು. ಆದರೆ ಇತ್ತೀಚೆಗೆ ಇಶಾ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬಾದ್‌ಶಾ ಜೊತೆಗಿನ ವೀಡಿಯೊಗಳನ್ನು ಹಾಕಿ “ಪ್ರತಿಯೊಂದು ಬಿರುಗಾಳಿಯೂ ಒಂದು ಪಾಠ ಕಲಿಸುತ್ತೆ, ಪ್ರತಿಯೊಂದು ಪ್ರಾರ್ಥನೆಯೂ ಭರವಸೆ ಕೊಡುತ್ತೆ” ಎಂದು ಬರೆದಾಗ ಇಬ್ಬರ ನಡುವೆ ಎಲ್ಲವೂ ಸರಿ ಇಲ್ಲ ಅನ್ನೋದು ಪಕ್ಕಾ ಆಗಿತ್ತು.

ಅಂದಹಾಗೆ, ಇಶಾ ರಿಖಿ ಬಾದ್‌ಶಾ ಅವರ ಎರಡನೇ ಹೆಂಡತಿಯಾಗಿದ್ದು, ಇದಕ್ಕೂ ಮುನ್ನ ಜ್ಯಾಸ್ಮಿನ್ ಅನ್ನೋರ ಜೊತೆ ಬಾದ್‌ಶಾ ಮದುವೆಯಾಗಿದ್ದರು. ಇನ್ನೊಂದೆಡೆ ಇಶಾ ರಿಖಿ ಈ ಬಾರಿಯ ಬಿಗ್ ಬಾಸ್ ಸೀಸನ್ 20ಕ್ಕೆ ಸ್ಪರ್ಧಿಯಾಗಿ ಬರಲಿದ್ದಾರೆ ಎಂಬ ಸುದ್ದಿಯೂ ಇದೀಗ ಹರಿದಾಡುತ್ತಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !