October 10, 2026
Saturday, October 10, 2026
spot_img

ದಿಲೀಪ್‌ ರಾಜ್‌ಗೆ ಗೋವಾದಲ್ಲೇ ಕಾಣಿಸಿಕೊಂಡಿತ್ತಾ ಎದೆ ನೋವು? ಹೆಲ್ತ್ ಚೆಕಪ್‌ಗೆ ಹೋಗುವ ಮುನ್ನವೇ ಹೀಗಾಯ್ತು!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜನಪ್ರಿಯ ನಟ, ನಿರ್ಮಾಪಕ ದಿಲೀಪ್‌ ರಾಜ್‌ (47) ಇಂದು ಮುಂಜಾನೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಅವರ ಹಠಾತ್ ನಿಧನ ಇಡೀ ಸ್ಯಾಂಡಲ್‌ವುಡ್ ಅನ್ನು ಆಘಾತಕ್ಕೆ ತಳ್ಳಿದೆ. ಇಂದು ಮುಂಜಾನೆ ಸಂಭವಿಸಿದ ಭೀಕರ ಹೃದಯಾಘಾತಕ್ಕೆ ಅವರು ಬಲಿಯಾಗಿದ್ದಾರೆ. ಆದರೆ, ಈ ದುರಂತ ಸಂಭವಿಸುವ ಮುನ್ನವೇ ಅವರ ದೇಹ ಹೃದಯಾಘಾತದ ಮುನ್ಸೂಚನೆಗಳನ್ನು ನೀಡಿತ್ತು ಎಂಬ ಶಾಕಿಂಗ್ ಮಾಹಿತಿ ಈಗ ಹೊರಬಿದ್ದಿದೆ.

ಕೆಲ ದಿನಗಳ ಹಿಂದೇ ದಿಲೀಪ್‌ ರಾಜ್‌ ಗೋವಾ ಪ್ರವಾಸ ಹೋಗಿದ್ದರು. ಆಗ ಅವರಿಗೆ ಎದೆನೋವಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದ ದಿಲೀಪ್‌, ವೈದ್ಯರನ್ನು ಭೇಟಿಯಾಗಲು ನಿರ್ಧರಿಸಿ, ಮೆಡಿಕಲ್‌ ಚೆಕಪ್‌ಗಾಗಿ ಇಂದು ವೈದ್ಯರ ಅಪಾಯಿಟ್ಮೆಂಟ್‌ ಪಡೆದುಕೊಂಡಿದ್ದರು. ಆದರೆ ವಿಧಿಯಾಟ ಬೇರೆಯೇ ಆಗಿತ್ತು.

ರಾತ್ರಿ ಊಟ ಮಾಡಿ ಮಲಗಿದ್ದ ದಿಲೀಪ್‌ ರಾಜ್‌ಗೆ ಇಂದು ಬೆಳಗ್ಗೆ 5.30ರ ಸುಮಾರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಪತ್ನಿ ವಿದ್ಯಾ ದಿಲೀಪ್‌ರನ್ನು ಹಾಸ್ಪಿಟಲ್‌ಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ದಿಲೀಪ್‌ ರಾಜ್‌ ಕೊನೆಯುಸಿರೆಳೆದಿದ್ದರು ಎಂದು ತಿಳಿದು ಬಂದಿದೆ.

ದಿಲೀಪ್ ನಿಧನಕ್ಕೆ ಇಡೀ ಚಿತ್ರರಣಗವೇ ಕಂಬನಿ ಮಿಡಿದ್ದು. ಯಾವುದೇ ಕೆಟ್ಟ ಹವ್ಯಾಸಗಳಿಲ್ಲದೆ, ಪ್ರತಿದಿನ ಜಿಮ್‌ಗೆ ಹೋಗಿ ಫಿಟ್‌ನೆಸ್ ಕಾಯ್ದುಕೊಳ್ಳುತ್ತಿದ್ದ ವ್ಯಕ್ತಿಗೆ ಹೀಗಾಗಿದ್ದು ನಂಬಲು ಸಾಧ್ಯವಾಗುತ್ತಿಲ್ಲ ಎಂದು ಅವರ ಆಪ್ತರು ಹೇಳಿಕೊಂಡಿದ್ದಾರೆ.

Must Read