May 20, 2026
Wednesday, May 20, 2026
spot_img

Discipline | ಫಿಟ್ನೆಸ್‌ನಲ್ಲಿ ಮೋಟಿವೇಷನ್‌ಗಿಂತ ಡಿಸಿಪ್ಲಿನ್ ಯಾಕೆ ಮುಖ್ಯ?

ಫಿಟ್ನೆಸ್ ಜರ್ನಿ ಶುರು ಮಾಡುವಾಗ ಎಲ್ಲರಲ್ಲೂ ಮೋಟಿವೇಷನ್ ತುಂಬಿರುತ್ತದೆ. ಹೊಸ ಜಿಮ್ ಶೂ, ಹೊಸ ಡಯಟ್ ಪ್ಲಾನ್, “ಈ ಸಲ ಖಂಡಿತ” ಅನ್ನೋ ಉತ್ಸಾಹ. ಎಲ್ಲವೂ ಚೆನ್ನಾಗಿಯೇ ಆರಂಭವಾಗುತ್ತದೆ. ಆದರೆ ಕೆಲವು ದಿನಗಳ ಬಳಿಕ ಆ ಉತ್ಸಾಹ ನಿಧಾನವಾಗಿ ಕಡಿಮೆಯಾಗುತ್ತದೆ. ಆಗ ಮುಂದುವರಿಸುವ ಶಕ್ತಿ ಕೊಡೋದು ಮೋಟಿವೇಷನ್ ಅಲ್ಲ, ಡಿಸಿಪ್ಲಿನ್.

ಮೋಟಿವೇಷನ್ ಯಾವಾಗಲೂ ಒಂದೇ ರೀತಿ ಇರೋದಿಲ್ಲ
ಪ್ರತಿ ದಿನವೂ ಎನರ್ಜಿ, ಉತ್ಸಾಹ ಒಂದೇ ತರ ಇರೋದಿಲ್ಲ. ಕೆಲ ದಿನ ಸೋಮಾರಿತನ ಬರುತ್ತೆ, ಕೆಲ ದಿನ ಮೂಡ್ ಇರೋದಿಲ್ಲ. ಆ ಸಮಯದಲ್ಲಿ “ಮಾಡ್ಬೇಕು” ಅಂತ ನಮ್ಮಣ್ಣ ನಾವು ಎಬ್ಬಿಸೋದು ಡಿಸಿಪ್ಲಿನ್.

ಹ್ಯಾಬಿಟ್ ಆಗೋದು ಡಿಸಿಪ್ಲಿನ್‌ನಿಂದ
ಪ್ರತಿದಿನ ಒಂದೇ ಸಮಯಕ್ಕೆ ವರ್ಕೌಟ್ ಮಾಡೋದು, ಸಮಯಕ್ಕೆ ಊಟ ಮಾಡೋದು, ನೀರು ಕುಡಿಯೋದು — ಇವೆಲ್ಲವೂ ಡಿಸಿಪ್ಲಿನ್‌ನಿಂದ ಹ್ಯಾಬಿಟ್ ಆಗುತ್ತವೆ. ಒಮ್ಮೆ ಹ್ಯಾಬಿಟ್ ಆಯ್ತು ಅಂದ್ರೆ ಫಿಟ್ನೆಸ್ ಸುಲಭವಾಗುತ್ತದೆ.

ಇದನ್ನೂ ಓದಿ:

ಫಲಿತಾಂಶ ನಿಧಾನವಾಗಿ ಬಂದರೂ ನಿಲ್ಲೋದಿಲ್ಲ
ಮೋಟಿವೇಷನ್ ಇದ್ದಾಗ ಮಾತ್ರ ಕೆಲಸ ಮಾಡಿದ್ರೆ ಫಲಿತಾಂಶ ಕಾಣಿಸದಿದ್ದರೆ ಬೇಗ ಬೇಸರವಾಗುತ್ತದೆ. ಆದರೆ ಡಿಸಿಪ್ಲಿನ್ ಇದ್ದರೆ ಫಲಿತಾಂಶ ತಡವಾದರೂ ಪ್ರಯತ್ನ ನಿಲ್ಲೋದಿಲ್ಲ.

ಸಣ್ಣ ಕೆಲಸಗಳೇ ದೊಡ್ಡ ಬದಲಾವಣೆ ತರುತ್ತವೆ
ಪ್ರತಿದಿನ 20 ನಿಮಿಷ ವಾಕ್, ಸಮಯಕ್ಕೆ ನಿದ್ರೆ, ಸ್ವಲ್ಪ ಹೆಲ್ತಿ ಫುಡ್ ಇವು ಸಣ್ಣದಾಗಿ ಕಾಣಿಸಿದರೂ ಡಿಸಿಪ್ಲಿನ್ ಇದ್ದರೆ ದೊಡ್ಡ ಬದಲಾವಣೆ ತರುತ್ತವೆ.

ಫಿಟ್ನೆಸ್‌ನಲ್ಲಿ ಬೆಸ್ಟ್ ರಿಸಲ್ಟ್ ಕೊಡುವುದು ಒಂದು ದಿನದ ಮೋಟಿವೇಷನ್ ಅಲ್ಲ… ಪ್ರತಿದಿನದ ಡಿಸಿಪ್ಲಿನ್. ಅದೇ ನಿಜವಾದ ಗೇಮ್ ಚೇಂಜರ್.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !